ಸಂಸದ ಸಿ.ಎಸ್‌ ಪುಟ್ಟರಾಜು ರಾಜಿನಾಮೆ ನೀಡಬೇಕು !

Kannada News

29-06-2017

ಮಂಡ್ಯ: ಮಂಡ್ಯ ಸಂಸದ ಪುಟ್ಟರಾಜು ಪಾಲುಧಾರಿಕೆಯ ಕ್ರಷರ್ ನಿಂದ ಅಕ್ರಮ ಕಲ್ಲುಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಸಕ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಪ್ರತಿಕ್ರಿಯಿಸಿದ್ದಾರೆ. ಪ್ರಾಕೃತಿಕ ರಕ್ಷಣೆ ಮಾಡಬೇಕಿರುವುದು ಜನಪ್ರತಿನಿಧಿ ಹೊಣೆಗಾರಿಕೆ. ಆದರೆ ಅವರೇ ಲೂಟಿ ಮಾಡುತ್ತಾರೆ ಎಂದರೆ ಹೊಣೆಗಾರಿಕೆ ಎಲ್ಲಿದೆ.? ಎಂದರು. ಆರ್.ಟಿ.ಐ ಕಾರ್ಯಕರ್ತರೊಬ್ಬರು ನೀಡಿರುವ ಮಾಹಿತಿ ಪ್ರಕಾರ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗುಣಾತ್ಮಕ ತನಿಖೆ ಮಾಡಬೇಕಿದೆ. ಕೇವಲ ಈ ಪ್ರಕರಣ ಒಂದಷ್ಟೇ ಅಲ್ಲದೆ ರಾಜ್ಯದಲ್ಲಿ ನಡೆಯುತ್ತಿರುವ ಪ್ರಾಕೃತಿಕ ಸಂಪತ್ತಿನ ಲೂಟಿ ಪ್ರಕರಣದ ಬಗ್ಗೆಯೂ ಎಸ್.ಐ.ಟಿ ತನಿಖೆ ಮಾಡಬೇಕು. ಈ ಮೂಲಕ ನಷ್ಟವಾಗಿರೋ ಹಣ ವಾಪಾಸ್ ಪಡೆಯುವುದರ ಜೊತೆಗೆ ತಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಇನ್ನು ಅಕ್ರಮ ಕಲ್ಲುಗಣಿಗಾರಿಕೆಗೆ ಸಂಬಂಧಪಟ್ಟಂತೆ ಸಂಸದ ಪುಟ್ಟರಾಜು ಪಾಲುಧಾರಿಕೆಯ ಕ್ರಷರ್ ಗೆ ದಂಡ ಹಾಕಲಾಗಿದೆ. ಅಲ್ಲದೇ ಪುಟ್ಟರಾಜು ವಿರುದ್ಧ ಅಕ್ರಮವಾಗಿ ನಿವೇಶನ ಪಡೆದಿರುವ ಆರೋಪವೂ ಇದೆ ಆದ್ದರಿಂದ, ಪುಟ್ಟರಾಜು ಸಂಸದ ಸ್ಥಾನದಲ್ಲಿ ಮುಂದುವರೆಯಬಾರದು. ಕೂಡಲೇ ರಾಜೀನಾಮೆ ಕೊಡಬೇಕು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ