ಶ್ರೀಗಳ ವಿರುದ್ಧ ನಮ್ಮ ಹೋರಾಟವಲ್ಲ !

Kannada News

29-06-2017

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಇದುವರೆಗೂ ಯಾವುದೇ ಇಫ್ತಿಯಾರ್ ಕೂಟಕ್ಕೆ ಹೋಗಿಲ್ಲ. ಅಮೆರಿಕದ ಅಧ್ಯಕ್ಷ ಟ್ರಂಪ್ ಸಹ ಇದನ್ನು ಪಾರ್ಲಿಮೆಂಟ್ ನಲ್ಲಿ ರದ್ದು ಮಾಡಿದ್ದಾರೆ. ಶ್ರೀ ಕೃಷ್ಣ ಮಠದಲ್ಲಿ ಇಫ್ತಿಯಾರ್ ಕೂಟ ಮಾಡುವ ಅವಶ್ಯಕತೆ ಎನಿತ್ತು .? ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ. ಪೇಜಾವರ ಶ್ರೀಗಳ ಬಗ್ಗೆ ನಮಗೆ ಗೌರವವಿದೆ. ನಮ್ಮ ನೋವನ್ನ ರಾಜ್ಯದ ಜನತೆಗೆ ತಿಳಿಸುವ ಕೆಲಸ ಮಾಡುತ್ತೇವೆ. ಸ್ವಾಮಿಜಿಯವರಿಂದ ಕ್ಷಮೆ ಅಪೇಕ್ಷೆ ಪಟ್ಟಿಲ್ಲ. ಎಚ್ಚರಿಕೆ ಕೊಡುವ ಹಿನ್ನೆಲೆಯಲ್ಲಿ ಮಾತ್ರ ನಮ್ಮ ಪ್ರತಿಭಟನೆ, ಮುಂದಿನ ದಿನಗಳಲ್ಲಿ ಎಲ್ಲಾ ಮಠದಲ್ಲಿ ಇಫ್ತಿಯಾರ್ ಹಾಗೂ ನಮಾಜ್ ಮಾಡುವ ಕೆಲಸ ಆಗಬಾರದು ಎಂಬ ಹಿನ್ನೆಲೆಯಲ್ಲಿ ಎಂಬ ನಮ್ಮ ಹೋರಾಟ ನಡೆಯಲಿದೆ, ಇದನ್ನ ಖಂಡಿಸಿ ಜುಲೈ 2 ರಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ ಮತ್ತು ಈ ಹೋರಾಟ, ಶಾಂತಿಯುತ ಹಾಗೂ ಕಾನೂನು ಚೌಕಟ್ಟಿನಲ್ಲೇ ನಡೆಯಲಿದೆ, ಪೇಜಾವರ ಶ್ರೀಗಳ ವಿರುದ್ಧ ನಮ್ಮ ಹೋರಾಟವಲ್ಲ. ಮಠದಲ್ಲಿ ನಡೆಸಿದ ಇಫ್ತಿಯಾರ್ ಕೂಟ ಹಾಗೂ ನಾಮಾಜ್ ಬಗ್ಗೆ ನಮ್ಮ ಹೋರಾಟ. ಶ್ರೀಗಳ ಬಗ್ಗೆ ನಮಗೆ ಅಪಾರ ಗೌರವ ಇದೆ. ಮಠದಲ್ಲಿ ಈ ‌ರೀತಿ ನಡೆದದ್ದು ನಮಗೆ ನೋವು ತಂದಿದೆ. ಸೌಹಾರ್ದ ಎಂಬುದು ಮಾತ್ರ ಹಿಂದೂಗಳಿಂದ ಬರುತ್ತಿದೆ. ಮುಸ್ಲಿಮರ ಕಡೆಯಿಂದ ಆಗುತ್ತಿಲ್ಲ. ಮುಸ್ಲಿಮರು ತಮ್ಮ ಮಸೀದಿಯಲ್ಲಿ ಹಿಂದೂ ಧರ್ಮದ ಹಬ್ಬಗಳನ್ನು ಆಚರಣೆ ಮಾಡಿಲ್ಲ. ಹಿಂದೂಗಳೇ ಎಲ್ಲದಕ್ಕೂ ಬೆಂಡಾಗುತ್ತಿದ್ದಾರೆ. ಎರಡು ಕಡೆಯಿಂದ ಸೌಹಾರ್ದತೆಯಾಗಬೇಕಿದೆ ಎಂದರು.               ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ