ಯಡಿಯೂರಪ್ಪ ರೈತ ವಿರೋಧಿ..?

Kannada News

29-06-2017

ಕೊಪ್ಪಳ: ಯಡಿಯೂರಪ್ಪ ರೈತ ವಿರೋಧಿ, ರಾಜ್ಯ ಸರ್ಕಾರ ಸೊಸೈಟಿಗಳ ಸಾಲವನ್ನು ಮನ್ನಾ ಮಾಡಿದರು ಕೂಡಾ ಯಡಿಯೂರಪ್ಪ ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನು ಹಾಕುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರು ಆರೋಪಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇಂದು ಕೂಡಲಸಂಗಮದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ನಾನು ಪಾಲ್ಗೋಳ್ಳಲು ಹೋಗುತ್ತಿದ್ದೇನೆ ಎಂದರು. ಸಚಿವ ಸಂಪುಟದ ವಿಸ್ತರಣೆ ಕುರಿತು ಹೈಮಾಂಡ್ ನೊಂದಿಗೆ ಚರ್ಚಿಸಿಲ್ಲ, ಅಲ್ಲಿ ಚರ್ಚಿಸಿದ ಬಳಿಕವೇ ಸಚಿವ ಸಂಪುಟದ ವಿಸ್ತರಣೆ ಮಾಡಲಾಗುವದು ಎಂದರು. ಇನ್ನು ಜಿ.ಎಸ್.ಟಿ ಇಂದ ಪ್ರಾಂರಭದಲ್ಲಿ ತೆರಿಗೆ ನಷ್ಟವಾಗಬಹುದು, ಇದರಿಂದಾಗುವ ತೆರಿಗೆ ನಷ್ಟವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಇಂದು ರಾಜ್ಯ ಸರ್ಕಾರ ಸೋಸೈಟಿಗಳ ಸಾಲವನ್ನು ಮನ್ನಾ ಮಾಡಿ ಎಂದು ಯಡಿಯೂರಪ್ಪನವರು ಆಗ್ರಹಿಸುತ್ತಿದ್ದರು. ನಾವು ಮನ್ನಾ ಮಾಡಿದರೂ ಕೂಡಾ ಇಂದು ಅವರು ಕೇಂದ್ರದ ಮೇಲೆ ಒತ್ತಡವನ್ನು ಹೇರುತ್ತಿಲ್ಲ ಯಡಿಯೂರಪ್ಪ ಒಬ್ಬ ರೈತ ವಿರೋಧಿ ಎಂದರು. ಇನ್ನು ಕೂಡಲ ಸಂಗಮದ ಕಾರ್ಯಕ್ರಮಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯ ಕರಿಯಣ್ಣ ಸಂಗಟಿಗೆ ಆಹ್ವಾನ ಮಾಡಿದ್ದು, ತಿಳಿಯದೇ ಆಗಿದೇ ಹಳೇ ಲಿಸ್ಟ್ ನ ಪ್ರಕಾರ ಅವರನ್ನು ಆಹ್ವಾನಿಸಲಾಗಿದೆ. ಆದರೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದರು. ಇನ್ನು ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿರುವ ಕುರಿತು ಗೊಂದಲ ಬೇಡಾ ಜೂನ್ 20,2017 ರ ವರೆಗಿನ ಸಾಲವನ್ನು ಮನ್ನಾ ಮಾಡಲಾಗಿದೆ ಇದರಲ್ಲಿ ಯಾವುದೇ ಶರತ್ತುಗಳಿಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ