ಕಾಂಗ್ರೆಸ್ ಜನರ ಹಣವನ್ನು ದರೋಡೆ ಮಾಡುತ್ತಿದೆ !

Kannada News

29-06-2017

 ವಿಜಯಪುರ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ಕೂಡಲ ಸಂಗಮ ಪಾದಯಾತ್ರೆ ಮಾಡಿ ಪ್ರತಿ ವರ್ಷ ನೀರಾವರಿಗೆ ೧೦ ಸಾವಿರ ಕೋಟಿ ನೀಡುವದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷ್ಣೆ, ಕೂಡಲ ಸಂಗಮ ನ ಮೇಲೆ ಪ್ರಮಾಣ ವಚನ ಮಾಡಿದ್ದರು. ಆದರೆ ಇಂದು ಖರ್ಚು ಮಾಡಿದ್ದು ಮಾತ್ರ ೫೩೪೦ ಸಾವಿರ ಕೋಟಿ. ಹಾಗಾದರೆ ನಿಮ್ಮ ಭರವಸೆ ಏನಾಯ್ತು?  ನಿಮ್ಮ ಪ್ರಮಾಣ ವಚನ ಏನಾಯ್ತು ? ಇದಕ್ಕೆ ಉತ್ತರ ನೀಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ಪ್ರಶ್ನಿಸಿದ್ದಾರೆ. ಕೃಷ್ಣಾ ನದಿ ತುಂಬಿದ್ದರೂ ಇಂದು ಅದನ್ನು ಸರಿಯಾಗಿ ನಿರ್ವಹಣೆ ಮಾಡದೇ ಖಾಲಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಪಕ್ಷದಲ್ಲಿ  ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದೂ ಹೇಳಿದ್ದಾರೆ. ಇನ್ನು ಕೂಡಲಸಂಗಮದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಭೆ ಕುರಿತು ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. ನೀರಾವರಿ ಸಚಿವ ಎಂ.ಬಿ ಪಾಟೀಲಮತ್ತು ಸಿದ್ದರಾಮಯ್ಯನವರು ಜನರ ಜೀವನದ ಜೊತೆ ಚಲ್ಲಾಟ ಆಡುತ್ತಿದ್ದಾರೆ, ಜನರ ಹಣವನ್ನು ದರೋಡೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಜಿಲ್ಲೆಯ ನೀರಾವರಿ ಮಂತ್ರಿಯಾಗಿ ಬೇಜವಾಬ್ದಾರಿ ಕೆಲಸ ಮಾಡುತ್ತಿದ್ದಾರೆ. ನಾಡಿನ ಜನತೆಗೆ ಶಾಪ ಆಗಿದೆ, ಇದಕ್ಕೆ ನಾನು ಪ್ರಶ್ನೆ ಮಾಡುತ್ತೇನೆ ಎಂದಿದ್ದಾರೆ. ಅಲ್ಲದೇ ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಯಾವುದೆ ರೀತಿಯ ಭಿನ್ನಾಭಿಪ್ರಾಯ ಇಲ್ಲ, ಭಿನ್ನಾಭಿಪ್ರಾಯ ಮಾಡಿದವರಿಗೆ ನಾನು ಎಚ್ಚರಿಕೆ ಕೊಡುತ್ತೇನೆ.  ಗೊಂದಲ ಮಾಡಿಕೊಳ್ಳಬಾರದು, ಮಾಡಿದವರಿಗೆ ಪಕ್ಷದಿಂದ ಹೊರ ಹಾಕುತ್ತೇನೆ ಎಂದು ಪಕ್ಷದವರಿಗೆ ಎಚ್ಚರಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ