ಅಪಘಾತದಲ್ಲಿ 3 ಬೈಕ್ ಸವಾರರ ದುರ್ಮರಣ !

Kannada News

29-06-2017

ಕೋಲಾರ: ಬೈಕ್ ಹಾಗೂ ಕಾರ್ ನಡುವೆ ಭೀಕರ ರಸ್ತೆ ಅಪಘಾತ ನಡೆದಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಬಾವಿಗೆ ಬಿದ್ದಿದೆ, ಈ ಅಪಘಾತದಲ್ಲಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೋಲಾರ ತಾಲ್ಲೂಕಿನ ಚಾಕಾಸನಹಳ್ಳಿ ನಿವಾಸಿಗಳಾದ ಅರುಣ್ (18) ಮುನಿರಾಜು(21) ಅರವಿಂದ್(20) ಮೃತರು, ಕೋಲಾರ ತಾಲ್ಲೂಕಿನ ಬೆಳ್ಳೂರು ಬಳಿ ತಡ ರಾತ್ರಿ, ರಾಷ್ಟ್ರೀಯ ಹೆದ್ದಾರಿ 75ರ ಸರ್ವೀಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. KA-03-AC-7874  ನಂಬರ್ ನ ಮಾರುತಿ ರಿಡ್ಜ್ ಕಾರ್ ಬಾವಿಗೆ ಬಿದ್ದಿದೆ. ಅಪಾಘಾತದಿಂದ ಬೈಕ್ ಹಾಗೂ ಕಾರ್ ನುಜ್ಜು ನುಜ್ಜಾಗಿದೆ. ಸ್ಥಳಕ್ಕೆ ವೇಮಗಲ್ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತು ಬಾವಿಗೆ ಬಿದ್ದಿರುವ ಕಾರನ್ನು ಮೇಲೆತ್ತುವ ಕಾರ್ಯಾಚರಣೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ