10 ಲಕ್ಷ ಹಳೆಯ ನೋಟುಗಳ ವಶ !

Kannada News

29-06-2017

ಕಾರವಾರ: ಕಳೆದ ನವೆಂಬರ್ ನಿಂದಲೇ ಕೇಂದ್ರ ಸರ್ಕಾರ ಹಳೆಯ 500 ಮತ್ತು 1000 ಮುಖಬೆಲೆ ನೋಟುಗಳನ್ನು ರದ್ದು ಮಾಡಿದ್ದು, ಇದಾದ ನಂತರ ಅನೇಕ ಕಡೆಗಳಲ್ಲಿ ಅಕ್ರಮ ವಾಗಿ ಬಚ್ಚಿಟ್ಟುಕೊಂಡಿದ್ದ ಹಳೆಯ ನೋಟುಗಳ ಸಾಲು ಸಾಲು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇವುಗಳ ಸರಣಿ ಇನ್ನೂ ಮುಂದು ವರಿಯುತ್ತಲೇ ಇದೆ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಮಾಜಿ ಪಾಲಿಕೆ ಸದಸ್ಯ ನಾಗರಾಜ್ ಅವರ ಮನೆಯಲ್ಲಿ ಕಂತೆ ಕಂತೆ ಹಳೆಯ ನೋಟುಗಳು ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿತ್ತು. ಇನ್ನು ಕಾರವಾರದಲ್ಲಿ ಇಂದು ಕಾರಿನಲ್ಲಿ ಸಾಗಿಸುತ್ತಿದ್ದ ಹತ್ತು ಲಕ್ಷ ಮೌಲ್ಯದ  ಹಳೆಯ ನೋಟುಗಳನ್ನು  ವಶಪಡಿಸಿಕೊಳ್ಳಲಾಗಿದೆ. ಕಾರವಾರದ ಬಾಂಡಿ ಶಿಟ್ಟಾದಲ್ಲಿ ಪೊಲೀಸರು ವಶಪಡಿಕೊಂಡಿದ್ದಾರೆ. ಹಳೆಯ ಐನೂರು ರೂಪಾಯಿಯ ಹತ್ತು ಲಕ್ಷ ಮೌಲ್ಯದ ನೋಟಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ, ಕುಮಟಾ ಮೂಲದ ಅಬ್ದುಲ್ ರಶೀದ್ ನನ್ನು ವಶಕ್ಕೆ ಪಡೆದಿದ್ದಾರೆ. ಈತ ಅಕ್ರಮವಾಗಿ ಹಳೆಯ ನೋಟುಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಪಶಪಡಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ