ದಲಿತ ಕುಟುಂಬಗಳಿಗೆ ಬಹಿಷ್ಕಾರ !

Kannada News

29-06-2017 184

ಹುಬ್ಬಳ್ಳಿ: ದಲಿತ ಕುಟುಂಬಗಳಿಗೆ ಬಹಿಷ್ಕಾರಕ ಕಾಕಿರುವ ಅಮಾನವಿಯ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. ಕ್ಷುಲ್ಲಕ ಕಾರಣಕ್ಕೆ ಮೇಲ್ಜಾತಿ ಮತ್ತು ದಲಿತರ ಮಧ್ಯೆ ಜಗಳ ನಡೆದಿದ್ದು, ಇದನ್ನೇ ನೆಪವಾಗಿಸಿಕೊಂಡು ಮೇಲ್ಜಾತಿಯರು ದಲಿತರಿಗೆ ಬಹಿಷ್ಕಾರ ಹಾಕಿಲಾಗಿದೆ ಎಂದು ತಿಳಿದು ಬಂದಿದೆ. ಕಲಘಟಗಿ ತಾಲ್ಲೂಕಿನ ದೇವರಕೊಂಡ ಗ್ರಾಮದಲ್ಲಿ  ರೀತಿಯ ಅಮಾನವೀಯ ಘಟನೆ ನಡೆದಿದೆ. ದೇವಸ್ಥಾನ, ದಿನಸಿ ಅಂಗಡಿಗಳಿಗೆ ದಲಿತರಿಗೆ ಪ್ರವೇಶ ನಿರಾಕರಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಸರ್ವಣಿಯರ ಜಮೀನಿನಲ್ಲಿ ದಲಿತರ ಜಾನುವರು ಮೇವು ತಿಂದಿತ್ತು, ಇದರಿಂದ ಕೋಪಗೊಂಡ ಸವರ್ಣಿಯರು ದಲಿತನನ್ನು ಮನಬಂದಂತೆ ಹೊಡೆದಿದ್ದರು. ಅದನ್ನು ಪ್ರಶ್ನೆ ಮಾಡಿದ ಗ್ರಾಮದ ನಿವಾಸಿಯಾದ ದುರುಗಪ್ಪ ಹರಿಜನ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಅಂಗಡಿಯವರು ದಿನಸಿ ಸಾಮಾನು ನೀಡಿದ್ದರಿಂದ ಅವರಿಗೆ ೫೦೦ ರೂಪಾಯಿ ದಂಡ ಹಾಕಿದ್ದಾರೆ. ಅಲ್ಲದೇ  ಬೈಕ್ ಮೇಲೆ ದಲಿತರನ್ನು ಕರೆದುಕೊಂಡು ಬಂದಿದಕ್ಕೆ ೧೦೦೦ ರೂಪಾಯಿ ದಂಡ ಹಾಕಿದ್ದು, ದಲಿತರನ್ನು ಅತ್ಯಂತ ಕೀಳು ಮಟ್ಟದಲ್ಲಿ ನಡೆಸಿಕೊಳ್ಳುತ್ತಿದ್ದಾರೆ, ಎಂದು ಇಲ್ಲಿನ ನಿವಾಸಿಗಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕಳೆದ ಹತ್ತು ದಿನಗಳಿಂದ ಮೇಲ್ಜಾತಿಯ ಜನರು ಈ ರೀತಿ ಬಹಿಷ್ಕಾರ ಹಾಕಿದ್ದು, ಕೂಲಿಗೂ ನಿರಾಕರಿಸಿದ್ದಾರೆ ಎಂದು ಆರೋಪಿಸಿ, ಈ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದಲಿತ ಕುಟುಂಬದಿಂದ, ಸವರ್ಣಿಯರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ