ಜೋಡಿ ಕೊಲೆ  ಆರೋಪಿಗಳ ಬಂಧನ !

Kannada News

29-06-2017

ಕೋಲಾರ: ಜೋಡಿ ಕೊಲೆ ಪ್ರಕರಣದ, ಇಬ್ಬರು ಅರೋಪಿಗಳನ್ನು ಕೋಲಾರದ ಪೊಲೀಸರು ಬಂಧಿಸಿದ್ದಾರೆ. ಜಮೀನು ವಿವಾದ ಹಿನ್ನೆಲೆ‌ಯಲ್ಲಿ ಇದೆ ತಿಂಗಳ ೨೫ ರಂದು ಅಣ್ಣಾ ತಂಗಿಯ ಕೊಲೆ ನಡೆದಿತ್ತು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಾಗನಹಳ್ಳಿ ಹಾಳು ಬಾವಿಯಲ್ಲಿ, ದಾರುಣವಾಗಿ ಪೆಟ್ರೋಲ್ ಸುರಿದು ಕೊಲೆ ಮಾಡಿ ಶವಗಳನ್ನ ಬಿಸಾಡಲಾಗಿತ್ತು. ಅಣ್ಣ ರೆಡ್ಡೆಪ್ಪ ಹಾಗೂ ತಂಗಿ ಸಾವಿತ್ರಮ್ಮ ಎಂಬುವವರನ್ನು, ಸಹೋದರನೆ ಕೊಲೆ ಮಾಡಿರುವುದು ಪತ್ತೆಯಾಗಿದೆ. ರೆಡ್ಡಪ್ಪ ಸಹೋದರ ರಾಮರೆಡ್ಡಿ ೪೫, ಲೊಕೇಶ್ ೪೦ ಬಂಧಿತ ಕೊಲೆ ಅರೋಪಿಗಳು. ಈ ಕುರಿತು ನಂಗಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಕೋಲಾರ ಜೋಡಿ ಕೊಲೆ  ಆರೋಪಿಗಳ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ