ಕುಟುಂಬ ಕಲಹ ಗೃಹಿಣಿ ಆತ್ಮ ಹತ್ಯೆ !

Kannada News

29-06-2017

ಮುಳಬಾಗಿಲು: ಕುಟುಂಬ ಕಲಹ ಹಿನ್ನೆಲೆ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ನೇತಾಜಿ ನಗರದಲ್ಲಿ ನಡೆದಿದೆ. ನಿತ್ಯಶ್ರೀ ಮೃತ ಗೃಹಿಣಿ. ಕಳೆದ ಒಂದು ವರ್ಷದ ಹಿಂದೆಯಷ್ಟೆ ಆಂಧ್ರಪ್ರದೇಶದ ನೂತನ್ ಸಾಯಿ ಪ್ರತಾಪ್ ಎಂಬುವವರೊಂದಿಗೆ ಮದುವೆಯಾಗಿತ್ತು. ಮದುವೆಯಾದ ಕೆಲದಿನಗಳು ಮಾತ್ರ ಇಬ್ಬರು ಆನ್ಯೋನ್ಯವಾಗಿದ್ದು, ನಂತರದಲ್ಲಿ ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿರುವುದಾಗಿ ತಿಳಿದು ಬಂದಿದೆ. ಇನ್ನು ಕಲಹ ದಿನೆ ದಿನೆ ಹೆಚ್ಚಾಗುತ್ತಿದ್ದೂ, ಬೇಸತ್ತ ಮಹಿಳೆ, ತನ್ನ ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಮುಳಬಾಗಿಲು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬೇಟಿ ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ