ದಲಿತರ ಬಹಿಷ್ಕಾರಕ್ಕೆ ಕಾರಣವಾಯ್ತು ಅಂಬೇಡ್ಕರ್ ಪ್ರತಿಮೆ !

Kannada News

28-06-2017

ಹೈದರಾಬಾದ್: ಜಾತಿವಾದ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟ ಪದ್ದತಿಗಳು, ಭಾರತದಲ್ಲಿ ಇನ್ನೂ ಜೀವಂತವಾಗಿವೆ ಎಂಬುದನ್ನು ಸಾಕಷ್ಟು ಬಾರಿ, ಹಲವಾರು ಪ್ರಕರಣಗಳಿಂದ ತಿಳಿದು ಬರುತ್ತಲೇ ಇರುತ್ತವೆ. ಇನ್ನು ಸ್ವಾತಂತ್ರ್ಯ ಪಡೆದು 70 ವರ್ಷಗಳು ಕಳೆದರೂ ಇನ್ನೂ ಇಂತಹ ಪದ್ದತಿಗಳು ಜಾರಿಯಲ್ಲಿರುವುದು ನಮ್ಮ ಸಾಮಾಜಿಕ ಜೀವನದ ಬಗ್ಗೆ, ಇನ್ನೂ ಬದಲಾಗದ ಮನಸ್ಥಿತಿಗಳ ಬಗ್ಗೆ ಹಿಡಿದ ಕೈಗನ್ನಡಿಯಾಗಿದೆ. ಬಲಿಷ್ಠವಾದ ಪ್ರಜಾಪ್ರಭುತ್ವ ವ್ಯವಸ್ಥೆ, ಕಟ್ಟಕಡೆಯ ವ್ಯಕ್ತಿಗೂ ಗೌರವ, ಜೀವಿಸುವ ಹಕ್ಕು ಎಂಬ ಸಂವಿಧಾನದ  ಕವಚವಿದ್ದರೂ ಇನ್ನೂ ಇಂತಹ ಅನಿಷ್ಟ ಪದ್ದತಿಗಳಿರುವುದು ಬೇಸರದ ಸಂಗತಿಯಾಗಿದೆ. ಇದಕ್ಕೆ ತಾಜಾ ಉದಾಹಣೆ ಎಂದರೆ, ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ದಲಿತರಿಗೆ ಸಾಮಾಜಿ ಬಹಿಷ್ಕಾರ ಹಾಕಿರುವುದು. ಇಲ್ಲಿನ ಗರಗಪ್ಪರು ಎಂಬ ಹಳ್ಳಿಯಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವುದು ವರದಿಯಾಗಿದೆ. ಇಷ್ಟು ವರ್ಷಗಳ ಕಾಲ ಸಾಮಾನ್ಯವಾಗಿದ್ದ ಇಲ್ಲಿನ ಜನ ಜೀವನ, ಡಾ" ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣ ಮಾಡಿದ ಮೇಲೆ, ದಲಿತರ ಮೇಲೆ ಇನ್ನಷ್ಟು ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಮೇಲು ಜಾತಿಯ ಜನರು ಇಲ್ಲಿನ ದಲಿತರಿಗೆ ಆಹಾರ ನೀಡುವುದನ್ನು ನಿರಾಕರಿಸಿದ್ದಾರೆ, ಮತ್ತು  ಯಾವುದೇ ಕೆಲಸವನ್ನು ನೀಡಲು ಕೂಡ ನಿರಾಕರಿದ್ದಾರೆ, ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಇಲ್ಲಿನ ದಲಿತರಿಗೆ ಯಾರಾದರು ಸಹಾಯ ಮಾಡಿದರೆ ಅವರ ಮೇಲೆ 500 ರಿಂದ 1000 ರವರೆಗೆ ದಂಡ ವಿಧಿಸಲಾಗುತ್ತದೆ, ಎಂದು ಇಲ್ಲಿನ ದಲಿತರೊಬ್ಬರು ತಮ್ಮ ದು:ಖ ಹೊರಹಾಕಿದ್ದಾರೆ. ಇದಕ್ಕೆ ಕಾರಣವಾದದ್ದೂ ಮಾತ್ರ ಕೆಲವೇ ದಿನಗಳ ಹಿಂದೆ ಇಲ್ಲಿ ಪ್ರತಿಷ್ಠಾಪಿಸಲಾದ ಅಂಬೇಡ್ಕರ್ ಅವರ ಪ್ರತಿಮೆ. ಈ ಕುರಿತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ದೂರು ನೀಡಿದ್ದು, ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸಂಪೂರ್ಣ ತನಿಖೆ ಮತ್ತು ಹೇಳಿಕೆಗಳನ್ನು ಪಡೆದುಕೊಂಡಿದ್ದು, ಈ ರೀತಿ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಇಲ್ಲಿಯ ಶಾಸಕರಾದ ಶ್ರೀಕಾಂತ್ ರೆಡ್ಡಿ ಅವರು ಹೇಳುವಂತೆ, ಇದು ಹೇಗೆ ಸಾಧ್ಯ ದಲಿತರೆಂದು ಸಾಮಾಜಿಕ ಬಹಿಷ್ಕಾರ ಮಾಡವುದು ಅಪರಾಧ, ಇದು ಸಂವಿಧಾನಕ್ಕೆ ವಿರೋಧ ಎಂದಿದ್ದಾರೆ. ಘಟನೆಯ ನಂತರ ಆಯೋಗವು ತಹಸೀಲ್ದಾರ ಮತ್ತು ಒಬ್ಬರು ಇನ್ಸ್ಪೆಕ್ಟರ್ ಅನ್ನು ಅಮಾನತು ಮಾಡಲಾಗಿದೆ ಮೂಲಗಳು ತಿಳಿಸಿವೆ.  ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ