ವಿಚ್ಚೇಧಿತ ಶ್ರೀಮಂತ ಮಹಿಳೆಯರೇ ಇವನ ಟಾರ್ಗೆಟ್ !

Kannada News

28-06-2017

ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್­ಸೈಟ್ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ಮದುವೆ­ಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ದೋಚಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಮಹಾನ್ ವಂಚಕ ಸಾದತ್ ಖಾನ್ ರಾಜ್ಯದ ಹಲವೆಡೆ ವಿಧವೆಯರು, ವಿಚ್ಚೇಧಿತ ಶ್ರೀಮಂತರ ಮಹಿಳೆಯರನ್ನು ವಂಚಿಸಿ ಮೋಜು ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸಾದತ್‍ಖಾನ್ ಬಂಧಿಸಿರುವ ಸುದ್ದಿಯನ್ನು ತಿಳಿದ ಹಲವು ವಂಚನೆಗೊಳಗಾದ ಮಹಿಳೆಯರು ಬಾಗಲೂರು ಪೊಲೀಸರನ್ನು ಸಂಪರ್ಕಿಸ ತೊಡಗಿದ್ದು ಅವರಿಂದ ಮಾಹಿತಿ ಪಡೆಯಲಾಗುತ್ತಿದೆ. ಅಲ್ಲದೇ ತಮ್ಮ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಗಳಿಗೆ ದೂರು ನೀಡುವಂತೆ ಸಲಹೆ ನೀಡಲಾಗುತ್ತಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಪಿ.ಎಸ್.ಹರ್ಷ ತಿಳಿಸಿದ್ದಾರೆ. ಆರೋಪಿಯು ವಿಧವೆಯರು, ವಿಚ್ಚೇಧಿತರಲ್ಲದೇ ವಯಸ್ಸು 35 ಕಳೆದರೂ ವಿವಾಹವಾಗಿರದ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಅಂತವರನ್ನು ಮದುವೆಯಾಗುವುದಾಗಿ ಹಣ ಸುಲಿಗೆ ಮಾಡುವವರೆಗೆ ನಂಬಿಸಿ ನಂತರ ತಾನು ಬಳಸುತ್ತಿದ್ದ ಮೊಬೈಲ್ ನಂಬರ್ ತೆಗೆದು ಮತ್ತೊಂದು ಸಿಮ್‍ಕಾರ್ಡ್ ಬಳಸಿ ಮತ್ತೊಬ್ಬ ಮಹಿಳೆಗೆ ಗಾಳ ಹಾಕುತ್ತಿದ್ದ. ಸುಲಿಗೆ ಮಾಡಿದ ಲಕ್ಷಗಟ್ಟಲೆ ಹಣವನ್ನು ವಿಮಾನದಲ್ಲಿ ಸುತ್ತಾಟ ಐಷಾರಾಮಿ ಹೊಟೇಲ್‍ ಗಳಲ್ಲಿ ವಾಸ್ತವ್ಯ ಇನ್ನಿತರ ಮೋಜಿಗೆ ಬಳಸುತ್ತಿದ್ದನು 50 ಲಕ್ಷದವರೆಗೆ ವಂಚನೆ ಮಾಡಿದ್ದರೂ ಆತನ ಬಳಿ ಯಾವುದೇ ಹಣ ದೊರೆತಿಲ್ಲ ಎಂದು ತಿಳಿಸಿದ್ದಾರೆ. ಇಲ್ಲಿವರೆಗೆ ಸುಮಾರು ನೂರು ಮಹಿಳೆಯರನ್ನು ವಂಚಿಸಿರುವುದು ಬೆಳಕಿಗೆ ಬಂದಿದ್ದು ಅವರ ಸಂಖ್ಯೆ ಹೆಚ್ಚುತ್ತಿದ್ದು ಆತನ ಬಳಿಯು ವಂಚನೆ ಮಾಡಿರುವ ನಿಖರ ಮಾಹಿತಿಯಲ್ಲ. ಮ್ಯಾಟ್ರಿಮೋನಿಯಲ್ ವೆಬ್­ಸೈಟ್‍ನಲ್ಲಿ ಸಾದತ್ ಕಾರ್ತಿಕ್ ಪ್ರೀತಮ್,ಪ್ರೇಮ್ ಇನ್ನಿತರ ಹೆಸರುಗಳಲ್ಲಿ ಸಂಪರ್ಕಿಸಿ ವಂಚಿಸಿರುವ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ