ಕಲಾಮಂದಿರ ಪ್ರಕರಣ: ಗೋ ಸಂರಕ್ಷಕ ಸಂಚಾಲಕನಿಂದ ದೂರು !

Kannada News

28-06-2017 219

ಬೆಂಗಳೂರು: ಮೈಸೂರು ಕಲಾ ಮಂದಿರದಲ್ಲಿ ಮಾಂಸಾಹಾರ ಸೇವನೆ ಮಾಡಿರು ವಿಚಾರ ಸದ್ಯಕ್ಕಂತು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ, ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಹಲವರು, ಈ ಘಟನೆಗೆ ಕಾರಣರಾದವರನ್ನು ಬಂಧಿಸಿ ಕ್ರಮ ಕೈಗೊಳ್ಳಿ ಎಂಬ ಕೂಗಿಗೆ ದಿನೆ ದಿನೆ ಹೆಚ್ಚಿನ ಬಲ ಸೇರ್ಪಡೆಗೊಳ್ಳುತ್ತಿದೆ. ಈ ಕುರಿತು ಸಾರ್ವಜನಿಕವಾಗಿ ಗೋಮಾಂಸ ಸೇವಿಸಿದ, ಪ್ರೊ.ಕೆ.ಎಸ್. ಭಗವಾನ್, ಮಹೇಶ್ಚಂದ್ರ ಗುರು ಅವರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸರಿಗೆ ಬಿಜೆಪಿಯ ಗೋ ಸಂರಕ್ಷಕ ಪ್ರಕೋಷ್ಠದ ಸಂಚಾಲಕ ಸುಂದರ್ ರಾಜ್ ರೈ ಅವರು ದೂರು ನೀಡಿದ್ದಾರೆ. ವೈಯ್ಯಾಲಿಕಾವಲ್ ಪೊಲೀಸರಿಗೆ ದೂರು ನೀಡಿರುವ ಸುಂದರ್ ರಾಜ್ ರೈ ಅವರು ಮೈಸೂರಿನ ಸರ್ಕಾರಿ ಕಲಾ ಮಂದಿರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಗೋಮಾಂಸ ಸೇವಿಸಿರುವ ಕೆ.ಎಸ್. ಭಗವಾನ್ ಹಾಗೂ ಮಹೇಶ್ಚಂದ್ರ ಗುರು ಕೋಮು ಭಾವನೆ ಕೆರಳಿಸುವ ಪ್ರಯತ್ನ ನಡೆಸಿದ್ದು, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಗೋಮಾತೆಯನ್ನು ಪೂಜಿಸುವ ಬಹುಸಂಖ್ಯಾತರ ಭಾವನೆ, ನಂಬಿಕೆಗೆ ಇವರಿಬ್ಬರು ಬುದ್ಧಿಜೀವಿಗಳು ಧಕ್ಕೆ ಉಂಟು ಮಾಡಿದ್ದಾರೆ. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿ ಪ್ರಚೋದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಸರ್ಕಾರಿ ಕಲಾ ಮಂದಿರದ ಸಭಾಂಗಣದಲ್ಲೇ ಇಂತಹ ಕೃತ್ಯ ನಡೆದಿರುವುದು ನಮಗೆ ನೋವು ತಂದಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ನ್ಯಾಯಾಲಯದಲ್ಲಿ ಶಿಕ್ಷೆ ಕೊಡಿಸುವಂತೆ ವಿನಂತಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ