ನಗರದಲ್ಲಿ ಮತ್ತೆ ಸದ್ದು ಮಾಡಿದ ಬ್ಲಾಕ್ ಪಲ್ಸರ್ !

Kannada News

28-06-2017

ಬೆಂಗಳೂರು: ವಿಜಯನಗರದ  ಪಾಪರೆಡ್ಡಿ ಪಾಳ್ಯ ಹಾಗೂ  ವೈಯಾಲಿಕಾವಲ್ ಲೇಔಟ್‍ನಲ್ಲಿ ಮಂಗಳವಾರ ರಾತ್ರಿ ಕೇವಲ ಒಂದು ಗಂಟೆಯೊಳಗೆ ಎರಡು ಪ್ರತ್ಯೇಕ ಕಡೆಗಳಲ್ಲಿ ಕಪ್ಪು ಬಣ್ಣದ ಪಲ್ಸರ್ ಬೈಕ್‍ನಲ್ಲಿ ಬಂದ ದುಷ್ಕರ್ಮಿ ಇಬ್ಬರು ಮಹಿಳೆಯರ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ. ನಾಗರಬಾವಿಯ ಪಾಪರೆಡ್ಡಿ ಪಾಳ್ಯದ ಬಳಿ ರಾತ್ರಿ 9.30ರ ವೇಳೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಗಿರಿಜಾ ಅವರ ಕತ್ತಿನಲ್ಲಿದ್ದ 45 ಗ್ರಾಂ ಚಿನ್ನದ ಸರವನ್ನು ಹಿಂದಿನಿಂದ ಬಂದ ದುಷ್ಕರ್ಮಿ ಕಸಿದು ಪರಾರಿಯಾಗಿದ್ದಾನೆ. ಇದಾದ 1 ಗಂಟೆಯೊಳಗೆ 10.15ರ ಸುಮಾರಿನಲ್ಲಿ ವೈಯಾಲಿಕಾವಲ್ ಲೇಔಟ್‍ಗೆ ಹೋಗಿರುವ ದುಷ್ಕರ್ಮಿ ಅಲ್ಲಿ ಅಂಕಿತ ಗೋಕಲೆ ಎಂಬ ಮಹಿಳೆಯ 10 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ. ಕಪ್ಪು ಬಣ್ಣದ ಪಲ್ಸರ್ ಬೈಕ್ ನಲ್ಲಿ ಬಂದ ದುಷ್ಕರ್ಮಿಯೊಬ್ಬನೇ ಎರಡು ಕೃತ್ಯಗಳನ್ನು ನಡೆಸಿದ್ದು, ಪ್ರಕರಣ ದಾಖಲಿಸಿರುವ ವಿಜಯನಗರ ಪೊಲೀಸರು ದುಷ್ಕರ್ಮಿಗಾಗಿ ತೀವ್ರ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ