ಸುಲಿಗೆಕೋರರ ಗ್ಯಾಂಗ್ ಬಂಧನ !

Kannada News

28-06-2017

ಬೆಂಗಳೂರು: ದುಶ್ಟಟಗಳು ಹಾಗೂ ಸಂಸಾರ ನಿರ್ವಹಣೆಗೆ ಗ್ಯಾಂಗ್ ಕಟ್ಟಿಕೊಂಡು ಸುಲಿಗೆ, ಮನೆಗಳವು, ಕಳ್ಳತನ ಕೃತ್ಯಗಳಲ್ಲಿ ತೊಡಗಿದ್ದ ನಾಲ್ವರು ಸುಲಿಗೆಕೋರ ಗ್ಯಾಂಗ್‍ನ್ನು ಕೋರಮಂಗಲ ಪೊಲೀಸರು ಪತ್ತೆಹಚ್ಚಿ 4ಲಕ್ಷ 60 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಪೀಣ್ಯ 2ನೇ ಹಂತದ ಪುನೀತ್ ಅಲಿಯಾಸ್ ಪುನಿ (25), ಹಂದ್ರಳ್ಳಿ ಮುಖ್ಯರಸ್ತೆಯ ಕಾಳಿಕ ನಗರದ ಸತೀಶ್ ಅಲಿಯಾಸ್ ಸತ್ಯ (33), ಕುಣಿಗಲ್ ನ ಹಾಲುವಾಗಿಲು ಗ್ರಾಮದ ದೇವರಾಜು ಅಲಿಯಾಸ್ ದೇವು (22), ಹೊಸಕೆರೆ ಹಳ್ಳಿಯ ರಘು (20) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ಅವರು ತಿಳಿಸಿದ್ದಾರೆ. ಬಂಧಿತರಿಂದ 4 ಲಕ್ಷ 60 ಸಾವಿರ ಮೌಲ್ಯದ 104 ಗ್ರಾಂ ತೂಕದ 4 ಚಿನ್ನದ ಸರಗಳು, 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು 7 ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಆರೋಪಿ ಪುನೀತ್ ಚೆನ್ನಪಟ್ಟಣ ತಾಲ್ಲೂಕಿನ ಗುಡ್ಡೆ ಅವೇರಹಳ್ಳಿಯ ಮೂಲದವನಾಗಿದ್ದು, ಪೀಣ್ಯದಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಾನೆ. ಮತ್ತೊಬ್ಬ ಆರೋಪಿ ಸತ್ಯ ಜೆಪಿ ನಗರದಲ್ಲಿನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು, ಇವರಿಬ್ಬರು ಆರೋಪಿಗಳು ಅಪರಾಧ ಕೃತ್ಯಗಳಲ್ಲಿ ಜಾಮೀನು ಪಡೆಯಲು ವಕೀಲರಿಗೆ ನೀಡಬೇಕಾದ ಶುಲ್ಕಕ್ಕೆ ದುಶ್ಚಟಗಳಿಗೆ ಹಾಗೂ ಸಂಸಾರ ನಿರ್ವಹಣೆಗಾಗಿ ಇನ್ನಿಬ್ಬರ ಜೊತೆ ಸೇರಿ ಸುಲಿಗೆಯಲ್ಲಿ ತೊಡಗಿದ್ದರು ಎಂದು ತಿಳಿಸಿದ್ದಾರೆ. ಕೋರಮಂಗಲ ಪೊಲೀಸ್ ಇನ್ಸ್ ಪೆಕ್ಟರ್ ಅಜಯ್ ನೇತೃತ್ವದ ವಿಶೇಷ ತಂಡ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಪತ್ತೆ ಹಚ್ಚಿ ಕೋರಮಂಗಲ, ಕುಣಿಗಲ್, ಮಾಗಡಿ, ಗಿರಿನಗರ, ಪರಪ್ಪನ ಅಗ್ರಹಾರಗಳಲ್ಲಿ ನಡೆದಿದ್ದ ಸುಲಿಗೆ, ಕಳವು ಸೇರಿದಂತೆ 7 ಪ್ರಕರಣಗಳನ್ನು ಬೇಧಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ