ಕೂಲಿ ಕಾರ್ಮಿಕರ ನೆಪದಲ್ಲಿ ಗಾಂಜಾ ಮಾರಾಟ !

Kannada News

28-06-2017

ಬೆಂಗಳೂರು: ಕೆಲಸದವರ ಸೋಗಿನಲ್ಲಿ ಕಾಲೇಜು ಐಟಿಬಿಟಿ ಕಂಪನಿಗಳ ಕಚೇರಿ ಬಳಿ ಗಾಂಜ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬಸವನಗುಡಿ ಪೊಲೀಸರು ಬಂಧಿಸಿ 500 ಗ್ರಾಂ ಗಾಂಜವನ್ನು ವಶಪಡಿಸಿಕೊಂಡಿದ್ದಾರೆ. ಬಸವನಗುಡಿಯ ಸರಸ (40), ಸವಿತಾ (35) ಬಂಧಿತರು ಇವರಿಂದ  27 ಸಾವಿರ ರೂ. ಮೌಲ್ಯದ 35 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ. ಆರೋಪಿಗಳು ಕೂಲಿ ಅವರ ನೆಪದಲ್ಲಿ ಇಂಜಿನಿಯರಿಂಗ್ ಕಾಲೇಜುಗಳು, ಐಟಿ-ಬಿಟಿ ಕಂಪನಿಗಳ ಕಚೇರಿಗಳ ಬಳಿ ಸುತ್ತಾಡುತ್ತ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಹೊರ ರಾಜ್ಯಗಳಿಂದ ಗಾಂಜ ತಂದು ಆರೋಪಿಗಳು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಬಸವನಗುಡಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ನಗರದ ಮತ್ತೊಂದೆಡೆ ಗಾಂಜ ಮಾರಾಟ ಮಾಡುತ್ತಿದ್ದ ಪರಪ್ಪನ ಅಗ್ರಹಾರದ ನಾರಾಯಣ ಎಂಬಾತನನ್ನು ಬಂಧಿಸಿರುವ ಶ್ರೀರಾಮಪುರ ಪೊಲೀಸರು ಒಂದೂವರೆ ಲಕ್ಷ ಮೌಲ್ಯದ 5 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಬೇರೆ ರಾಜ್ಯದಿಂದ ಗಾಂಜಾವನ್ನು ತಂದು ಮಾರಾಟ ಮಾಡಲು ಹೋಗುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಶ್ರೀರಾಂಪುರ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ