ಲಾರಿ ಡಿಕ್ಕಿ ಬೈಕ್ ಸವಾರ ಸಾವು !

Kannada News

28-06-2017

ಬೆಂಗಳೂರು: ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ಬುಧವಾರ ಬೆಳಿಗ್ಗೆ ವೇಗವಾಗಿ ಬಂದ ಲಾರಿ ಏಕಾಎಕಿ ಎಡಕ್ಕೆ ತೆಗೆದುಕೊಂಡು ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿ ಹೋಗುತ್ತಿದ್ದ ಖಾಸಗಿ ಕಂಪನಿಯೊಂದರ ಮಿಷನ್ ಅಪರೇಟರ್‍ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಹಾವೇರಿ ಮೂಲದ ನವೀನ್‍ಕುಮಾರ್(36) ಎಂದು ಗುರುತಿಸಲಾಗಿದೆ. ನವೀನ್‍ಕುಮಾರ್ ಅವರು ಅತ್ತಿಬೆಲೆ ಬಳಿಯ ಬುಲರ್ ಕಂಪನಿಯಲ್ಲಿ ಮಿಷನ್ ಅಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಕುಟುಂಬ ಸಮೇತ ಅತ್ತಿಬೆಲೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಕೆಲಸಕ್ಕೆ ಬೆಳಿಗ್ಗೆ 6.45ರ ವೇಳೆ ಬೈಕ್‍ನಲ್ಲಿ ನವೀನ್ ಕುಮಾರ್ ಹೋಗುತ್ತಿದ್ದಾಗ ಮಾರ್ಗಮಧ್ಯೆ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ಪಕ್ಕದಲ್ಲೇ ಬರುತ್ತಿದ್ದ ಲಾರಿ ಡಿಕ್ಕಿ ಏಕಾಎಕಿ ಎಡಗಡೆ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೆಳಗೆಬಿದ್ದು ಗಂಭೀರವಾಗಿ ಗಾಯಗೊಂಡ ನವೀನ್‍ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿ ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ