ಕಾಮುಕ ಪ್ರಿನ್ಸಿಪಾಲ್ ಎಸ್ಕೇಪ್ !

Kannada News

28-06-2017

ಬೆಂಗಳೂರು: ಶಾಲೆಯ ಪ್ರಿನ್ಸಿಪಾಲ್, ಶಿಕ್ಷಕಿಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ, ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೋಲದೇವನಹಳ್ಳಿಯ, ಗೋಪಾಲ ವಿದ್ಯಾಕೇಂದ್ರದ ಪ್ರಿನ್ಸಿಪಾಲ್ ಮುರುಳೀಧರ, ವಿದ್ಯಾರ್ಥಿಗಳೊಂದಿಗೆ ಅನೂಚಿತವಾಗಿ ವರ್ತಿಸುತ್ತಿದ್ದ ಎಂದು ತಿಳಿದು ಬಂದಿದೆ. ಅವಿವಾಹಿತನಾಗಿದ್ದ ಮುರುಳಿಧರ್(62)ಕಾಟ ತಾಳಲಾರದೆ ಶಾಲೆಯ ಕೆಲ ಶಿಕ್ಷಕಿಯರು,ವಿದ್ಯಾರ್ಥಿನಿಯರು ದೂರು ನೀಡಲು ಮುಂದಾಗಿರುವುದನ್ನು ತಿಳಿದು ಮುರುಳೀಧರ ಪರಾರಿಯಾಗಿದ್ದಾನೆ. ಮುರುಳೀಧರನನ್ನು ಬಂಧಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಳೆದ 10 ವರ್ಷಗಳ ಹಿಂದೆ ಗೋಪಾಲ ವಿದ್ಯಾಕೇಂದ್ರ ಶಾಲೆಯನ್ನು ಆರಂಭಿಸಿದ್ದು, 450 ಜನ ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ 14 ಜನ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ, ಮುರಳಿಧರನ ಲೈಂಗಿಕ ಕಿರುಕುಳವನ್ನು ಸಹಿಸದೆ ಕೆಲವು ಶಿಕ್ಷಕರು ಕೆಲಸ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯರ ಜೊತೆ ಸಲುಗೆಯಿಂದ ವರ್ತಿಸುತ್ತಿದ್ದ ಮುರುಳೀಧರ ಪರೀಕ್ಷೆಯಲ್ಲಿ ಫೇಲ್ ಮಾಡುತ್ತೇನೆ ಅಂತ ಬೆದರಿಸಿ ವಿದ್ಯಾರ್ಥಿಗಳ ಮೈ ಕೈ ಮುಟ್ಟಿ ಬರೋಬ್ಬರಿ 5 ವರ್ಷಗಳಿಂದ ವಿದ್ಯಾರ್ಥಿಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಎಂದು ಆರೋಪಿಸಲಾಗಿದೆ. ಶಿಕ್ಷಕಿಯರ ಜೊತೆ ಸಲುಗೆಯಿಂದ ವರ್ತಿಸಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪೀಡಿಸುತ್ತಿದ್ದ ಎಂದು ಶಿಕ್ಷಕಿಯೊಬ್ಬರು ಆರೋಪಿಸಿದ್ದಾರೆ. ಮುರುಳೀಧರನ ಕಿರುಕುಳ ತಾಳಲಾರದೇ ಕೆಲ ಶಿಕ್ಷಕಿಯರು ವಿದ್ಯಾರ್ಥಿನಿಯರ ಜೊತೆ ಸೇರಿ ಪೊಲೀಸ್ ಠಾಣೆಗೆ ದೂರು ಕೊಡಲು ಮುಂದಾಗುತ್ತಿದ್ದಂತೆ, ಮುರುಳಿಧರ್ ಪರಾರಿಯಾಗಿದ್ದು ಆತನಿಗಾಗಿ ಸೋಲದೇವನಹಳ್ಳಿ ಪೊಲೀಸರು ಶೋಧ ನಡೆಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ