ಪೇಜಾವರ ಶ್ರೀಗಳ ನಿರ್ಧಾರ ಇಡೀ ದೇಶಕ್ಕೇ ಮಾದರಿ !

Kannada News

28-06-2017

ಬೆಂಗಳೂರು: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್‍ ಕೂಟ ನಡೆಸಿದ ಪೇಜಾವರ ಶ್ರೀಗಳ ನಿರ್ಧಾರ ದೇಶಕ್ಕೆ ಮಾದರಿಯಾಗುವಂತಹದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಕುಮಾರಕೃಪಾದಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ, ಮಾತನಾಡಿದ ಅವರು, ಪೇಜಾವರ ಶ್ರೀಗಳ ನಡೆ ಪ್ರಶಂಸನೀಯವಾದದ್ದು, ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಮಾದರಿಯಾಗುವ ಕ್ರಮ ಇದಾಗಿದೆ. ಈ ನಿರ್ಧಾರವನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಮಹಾತ್ಮಗಾಂಧೀಜಿಯವರು ಇಂತಹ ನಡೆಯನ್ನೇ ಬಯಸಿದ್ದರು. ಶಾಂತಿ, ಸೌಹಾರ್ದತೆಗಾಗಿ ಶ್ರೀಗಳ ನಿರ್ಧಾರ ಸ್ವಾಗತಾರ್ಹ ಎಂದರು. ಇಫ್ತಾರ್ ಕೂಟದ ಮೂಲಕ ಪೇಜಾವರ ಶ್ರೀಗಳು ಇಡೀ ರಾಜ್ಯದಲ್ಲಿ ಶಾಂತಿ ಕಾಪಾಡಲು ಮುನ್ನುಡಿ ಬರೆದಿದ್ದಾರೆ. ಕೆಲವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಟೀಕೆ ಮಾಡುತ್ತಿರುವುದು ಸರಿಯಲ್ಲ. ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ಸೌಹಾರ್ದತೆ ಇರಬಾರದೆಂಬ ಭಾವನೆ ಇದ್ದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ