ಎಚ್.ವಿಶ್ವನಾಥ್ ಜೆಡಿಎಸ್ ಸೇರುತ್ತಾರಂತೆ..?

Kannada News

28-06-2017

ಮೈಸೂರು: ಮಾಜಿ ಸಂಸದ ಎಚ್.ವಿಶ್ವನಾಥ್ ರಾಜಕೀಯ ನಡೆ ಬಗೆಗಿನ ಕುತೂಹಲಕ್ಕೆ ವಿಶ್ವನಾಥ್ ಅವರ ಪುತ್ರ ತೆರೆ ಎಳೆದಿದ್ದಾರೆ. ಈ ಮೂಲಕ ವಿಶ್ವನಾಥ್ ಜುಲೈ 4 ರಂದು ಜೆಡಿಎಸ್ ಸೇರ್ಪಡೆ ಯಾಗಲಿದ್ದಾರೆ ಎಂದೂ ತಿಳಿಸಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆಯುವ ಮೂಲಕ ಸೇರ್ಪಡೆಯಾಗುವುದಾಗಿ ವಿಶ್ವನಾಥ್ ಅವರ ಪುತ್ರ ಪೂರ್ವಜ್ ವಿಶ್ವನಾಥ್ ಅವರು, ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಬಳಿಕ ಒಂದು ವಾರ ಅಭಿಮಾನಿಗಳು, ರಾಜಕೀಯ ಸ್ನೇಹಿತರೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ಮಾಡಿದ್ದಾರೆಂದು ಮಗನ ಪೋಸ್ಟ್ ಮೂಲಕ ತಿಳಿದು ಬಂದಿದೆ. ಕರ್ನಾಟಕದ ನೆಲ, ಜಲ, ರೈತರ ಕಷ್ಟಕ್ಕೆ ಸ್ಪಂದಿಸುವ ಪಕ್ಷ ಮತ್ತು ತಮ್ಮನ್ನು ನಂಬಿರುವ ಮುಸ್ಲಿಂ ಗೆಳೆಯರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕಾಗಿ ಈ ನಿರ್ಧಾರ ಮಾಡಿದ್ದಾರೆ ಎಂದೂ ಕೂಡ ಬರೆದುಕೊಂಡಿದ್ದಾರೆ. ಜೆಡಿಎಸ್ ಗೆ ವಿಶ್ವನಾಥ್ ಅವರ ಸೇರ್ಪಡೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ. ಪೂರ್ವಜ್ ಪೋಸ್ಟ್ ಗೆ ಅಭಿಮಾನಿಗಳಿಂದ, ಒಳ್ಳೆಯ ನಿರ್ಧಾರವೆಂದು ಮೆಚ್ಚುಗೆಯ ಕಮೆಂಟ್ಸ್ ಗಳು ಕೂಡ ಬಂದಿವೆ ಎನ್ನಲಾಗುತ್ತಿದೆ. ಒಟ್ಟಾರೆ ತೀವ್ರ ಕುತೂಹಲ ಕೆರಳಿಸಿದ್ದ ವಿಶ್ವನಾಥ್ ಅವರ ನಡೆ, ತನ್ನ ಮಗನ ಮೂಲಕ ತಿಳಿದಿದ್ದೂ ಮುಂದೇನಾಗುತ್ತದೆಂದು ಕಾದು ನೋಡಬೇಕಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ