ನಾಡ ಬಂದೂಕು ಮಾರುತ್ತಿದ್ದವನ ಬಂಧನ !

Kannada News

28-06-2017

ಬೆಂಗಳೂರು : ಅಕ್ರಮವಾಗಿ ನಾಡ ಬಂದೂಕು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಗೌತಮ್ ಪಾಂಡೇ(28) ಬಂಧಿತ ಆರೋಪಿಯಾಗಿದ್ದಾನೆ. ಬಿಹಾರ ಮೂಲದ ಗೌತಮ್ ಪಾಂಡೇಯನ್ನು, ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ, ಗೌತಮ್ ಪಾಂಡೇ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದು, ಬಿಹಾರದಿಂದ ನಾಡ ಬಂದೂಕು ತಂದು ಮಾರಾಟಕ್ಕೆ ಯತ್ನಿಸಿದ್ದ. ರೈಲಿನಲ್ಲಿ ಬಂದು, ಬೆಂಗಳೂರಿನಲ್ಲಿ ನಾಡ ಬಂದೂಕು ಮಾರಾಟ ಮಾಡಿ ವಾಪಸ್ಸಾಗುತ್ತಿದ್ದ, ಇದೇ ಈತನ ಚಾಳಿಯಾಗಿದ್ದು, ಈ ಬಾರಿ ಮಾರಾಟಕ್ಕೆ ಬಂದಿದ್ದಾಗ, ಮಾರತ್ತಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು ಖಚಿತ ಮಾಹಿತಿ ಪಡೆದಿದ್ದರು. ಇದೇ ಮಾಹಿತಿಯನ್ನು ಆಧರಿಸಿ ಗೌತಮ್ ಪಾಂಡೇಯನ್ನ ಬಂಧಿಸಿದ್ದಾರೆ. ಬಂಧಿತನಿಂದ ಎರಡು ನಾಡ ಬಂದೂಕು, 2 ಜೀವಂತ ಗುಂಡು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ