ವಿಷ ಸೇವಿಸಿ ರೈತ ಆತ್ಮ ಹತ್ಯೆ !

Kannada News

28-06-2017

ಮೈಸೂರು: ರಾಜ್ಯ ಸರ್ಕಾರದಿಂದ ರೈತರ ಸಾಲಮನ್ನವಾದರೂ, ರಾಜ್ಯದಲ್ಲಿ ನಿಲ್ಲದ ಅನ್ನದಾತರ ಆತ್ಮಹತ್ಯೆ. ಮೈಸೂರಿನಲ್ಲಿಯೂ ರೈತರ ಆತ್ಮಹತ್ಯೆ ಮುಂದುವರೆದಿದೆ. ಸಾಲಬಾಧೆ ತಾಳಲಾರದೆ, ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಗುಜ್ಜೆಗೌಡನ ಪುರ ಗ್ರಾಮದಲ್ಲಿ ನಡೆದಿದೆ. ಕರಿಶೆಟ್ಟಿ (40) ಮೃತ ರೈತ. ಕರಿಶೆಟ್ಟಿ ಅವರು ಸುಮಾರು 4 ಲಕ್ಷ ಸಾಲ ಮಾಡಿಕೊಂಡಿದ್ದರು. ತನ್ನ ಜಮೀನಿನಲ್ಲಿ ಹತ್ತಿ ಮತ್ತು ಟಮೋಟೋ ಬೆಳೆ ಬೆಳೆಯಿತ್ತಿದ್ದೂ, ಮಳೆಯಿಲ್ಲದೆ ಬೆಳೆ ಒಣಗಿದ್ದರಿಂದ ಕಂಗಾಲಾಗಿದ್ದ ರೈತ ವಿಷ ಸೇವಿಸಿದ್ದಾರೆ. ಜಯಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ