ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನ ವಜಾ !

Kannada News

28-06-2017

ಮೈಸೂರು: ಮ್ಯಾನ್ ಹೋಲ್ ಗೆ ಯಾವುದೇ ಪೌರಕಾರ್ಮಿಕ ಅಥವಾ ಇನ್ನಿತರ ಕಾರ್ಮಿಕರನ್ನು ಇಳಿಸ ಬಾರದೆಂಬ ನಿಯಮಿದೆ. ಈ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಭಾರೀ ಚರ್ಚೆ ಮತ್ತು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು, ಇನ್ನು ಒತ್ತಾಯಪೂರ್ವಕವಾಗಿ ಮ್ಯಾನ್ ಹೋಲ್ ಗೆ ಪೌರ ಕಾರ್ಮಿಕನನ್ನು ಇಳಿಸಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ. ಚಾಮುಂಡಿ ಬೆಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸ್ಥಾನವನ್ನು ವಜಾಮಾಡಲಾಗಿದೆ. ಎಸ್.ಗೀತಾ ಅವರ ಅಧ್ಯಕ್ಷೆ ಸ್ಥಾನ ವಜಾ ಮಾಡಲಾಗಿದೆ. ಪೌರ ಕಾರ್ಮಿಕ ಗಣೇಶ್ ಎಂಬಾತನನ್ನು ಮ್ಯಾನ್ ಹೋಲ್ ಗೆ ಇಳಿಸಲಾಗಿತ್ತು. ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಸಿಇಒ ಶಿವಶಂಕರ್ ಅವರು ಗೀತಾ ಅವರನ್ನು  ವಜಾ ಮಾಡುವಂತೆ, ಪಂಚಾಯತ್ ರಾಜ್ ಇಲಾಖೆಗೆ ಪತ್ರ ಬರೆದಿದ್ದರು. ಇದೀಗ ಒತ್ತಾಯಪೂರ್ವಕವಾಗಿ ಮ್ಯಾನ್ ಹೋಲ್ ಗೆ ಪೌರ ಕಾರ್ಮಿಕನನ್ನು ಇಳಿದ ಪರಿಣಾಮ ಗೀತಾ ಅವರ ಸ್ಥಾನ ವಜಾಮಾಡಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ