ಕೆ.ಆರ್.ಎಸ್ ನಲ್ಲಿ ನೀರಿನ ಮಟ್ಟ ಹೆಚ್ಚಳ !

Kannada News

28-06-2017

ಮಂಡ್ಯ: ಕೆ.ಆರ್.ಎಸ್ ಡ್ಯಾಂನ ನೀರಿನ ಮಟ್ಟ ಒಂದು ಅಡಿ ಹೆಚ್ಚಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗಿರುವುದರಿಂದ ಒಳಹರಿವೂ ಕೂಡ ಹೆಚ್ಚಾಗಿದೆ. ನಿನ್ನೆ 67.93 ಅಡಿ ಇದ್ದ ನೀರಿನ ಮಟ್ಟ.ಇಂದು 68.35 ಅಡಿಗೆ ಹೆಚ್ಚಿದೆ. ನಿನ್ನೆ 1229 ಕ್ಯೂಸೆಕ್ ಇದ್ದ ಒಳಹರಿವು. ಇಂದು 2746 ಕ್ಯೂಸೆಕ್ ಗೆ ಹೆಚ್ಚಳವಾಗಿದೆ. ಕೆ.ಆರ್.ಎಸ್ ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ. ಪ್ರಸ್ತುತ ಡ್ಯಾಂನಲ್ಲಿರುವ ನೀರಿನ ಪ್ರಮಾಣ 68.35 ಅಡಿಗಳಷ್ಟಿವೆ. ಇನ್ನೂ ಹಾಸನ,ಹೇಮಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು. ಗೊರೂರಿನ ಹೇಮಾವತಿ ಜಲಾಶಯದ ನೀರಿನ ಮಟ್ಟ ಕೂಡ ಹೆಚ್ಚಿದೆ. ಕೇರಳದ ವೈನಾಡು ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆ. ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ನೀರಿನ ಮಟ್ಟದಲ್ಲಿಯೂ ಹೆಚ್ಚದ್ದೂ, ಜಲಾಶಯಕ್ಕೆ ಒಳಹರಿವಿನ ನೀರಿನ ಪ್ರಮಾಣ ಏರಿಕೆಯಾಗಿದೆ. ಜಲಾಶಯದ ಇಂದಿನ ಒಳ ಹರಿವು 13,600 ಕ್ಯೂಸೆಕ್ಸ್. ಜಲಾಶಯದ ಹೊರ ಹರಿವು 100 ಕ್ಯೂಸೆಕ್ಸ್ ಇದೆ. ಜಲಾಶಯದ ಗರಿಷ್ಠ  ಮಟ್ಟ ಸಮುದ್ರ ಮಟ್ಟದಿಂದ 2284 ಅಡಿಗಳಾಗಿದ್ದು, ಒಂದೇ ದಿನದಲ್ಲಿ ಜಲಾಶಯದ ನೀರಿನ ಮಟ್ಟ 5 ಅಡಿ ಹೆಚ್ಚಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ