ಸಂಸದನ ಅಕ್ರಮ ಕಲ್ಲುಗಣಿಗಾರಿಕೆಗೆ ಭಾರೀ ದಂಡ !

Kannada News

28-06-2017

ಮಂಡ್ಯ: ಅಕ್ರಮ ಕಲ್ಲು ಗಣಿಗಾರಿಕೆ ಹಿನ್ನೆಲೆಯಲ್ಲಿ, ಸಂಸದನ ಪಾಲುದಾರಿಕೆಯ ಕಂಪನಿಗೆ ಲಕ್ಷಾಂತರ ರೂಪಾಯಿ ದಂಡ ವಿಧಿಸಲಾಗಿದೆ. ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ಪಾಲುದಾರಿಕೆಯ ಎಸ್.ಟಿ.ಜಿ. ಸ್ಟೋನ್ ಕ್ರಷರ್ ಇದಾಗಿದ್ದು, ಸಿ.ಎಸ್.ಪುಟ್ಟರಾಜು ಅವರ ಅಣ್ಣನ ಮಗ, ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಅಶೋಕ್ ಮಾಲೀಕತ್ವದ ಕಂಪನಿಗೆ ಭಾರೀ ದಂಡ ವಿಧಿಸಲಾಗಿದೆ. ಸುಮಾರು 40,68,828 ರೂಪಾಯಿ ದಂಡ ಕಟ್ಟುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ, ಹಿರಿಯ ಭೂ ವಿಜ್ಞಾನಿ ನಾಗಭೂಷಣ್ ಆದೇಶಿಸಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟ ಬೇಬಿ ಬೆಟ್ಟದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ಆರೋಪವಿತ್ತು. ಮತ್ತು ಈ ಬಗ್ಗೆ ಮಂಡ್ಯದ ಆರ್.ಟಿ.ಐ ಕಾರ್ಯಕರ್ತರಾದ ಕೆ.ಆರ್.ರವೀಂದ್ರ ಎಂಬುವರು ಲೋಕಾಯುಕ್ತಕ್ಕೆ ಮತ್ತು ಸರ್ಕಾರಕ್ಕೆ ದೂರು ನೀಡಿದ್ದರು.ಇದೀಗ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ. ಸಂಸದನ ಪಾಲುದಾರಿಕೆ ಸೇರಿ ಒಟ್ಟು 18 ಕಂಪನಿಗೆ ದಂಡ ವಿಧಿಸಿದೆ. 18 ಕಂಪನಿಗಳಿಗೂ ಒಟ್ಟು 90,80,666 ರೂಪಾಯಿ ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸಿ.ಎಸ್.ಪುಟ್ಟರಾಜು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ