ಚಾಕ್ಲೇಟ್ ಕೊಳ್ಳುವ ನೆಪದಲ್ಲಿ ಚಿನ್ನದ ಸರ ಎಗರಿಸಿದ !

Kannada News

28-06-2017

ಮಂಡ್ಯ: ಅಂಗಡಿಯಲ್ಲಿದ್ದ ವೃದ್ಧೆಯಿಂದ ಚಿನ್ನದ ಸರ ಕಿತ್ತು ಪರಾರಿಯಾದ ಘಟನೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಅಂಕಾಳಮ್ಮನ ದೇವಸ್ಥಾನದ ಹತ್ತಿರ ನಡೆದಿದೆ. ಲಲಿತಮ್ಮ ಎಂಬುವರನ್ನು ಯಾಮಾರಿಸಿ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಚಾಕ್ಲೇಟ್ ತೆಗೆದುಕೊಳ್ಳುವ ನೆಪದಲ್ಲಿ ಬಂದ ಅಪರಿಚಿತ ಯುವಕ ಈ ಕೃತ್ಯ ಎಸಗಿದ್ದಾನೆ. ಚಿನ್ನದ ಸರ ಕಿತ್ತುಕೊಳ್ಳುವ ವೇಳೆ ಸರ ತುಂಡಾಗಿದೆ. ಪಲ್ಸರ್ ಬೈಕಿನಲ್ಲಿ ಬಂದಿದ್ದ ಸುಮಾರು 24 ವರ್ಷದ ಯುವಕ ಸರಗಳ್ಳತನ ನಡೆಸಿದ್ದಾನೆ. ಸುಮಾರು 60 ಸಾವಿರ ಮೌಲ್ಯದ ಚಿನ್ನದ ಸರವಾಗಿದ್ದೂ, ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ