ಭಾರತ ಮತ್ತು ಅಮೇರಿಕದ ಸಂಬಂಧಕ್ಕೆ ಹೆದರಿದ ಚೀನಾ !

Kannada News

28-06-2017 866

ಚೀನಾ ದೇಶ ಭಾರತದ  ಮೇಲೆ ನಿರಂತರ ಒಂದಲ್ಲ ಒಂದು ರೀತಿಯಲ್ಲಿ ಆರೋಪ ಮತ್ತು ಗಡಿಯಲ್ಲಿ ತಕರಾರು, ಅಂತರಾಷ್ಟೀಯ ಸಂಬಂಧಗಳಲ್ಲಿ ಬಿರುಕು ಮೂಡುವಂತಹ ಪ್ರಯತ್ನಗಳನ್ನು ಮಾಡುತ್ತಲೇ ಇದೇ. ಮೊನ್ನೆಯಷ್ಟೆ ಭಾರತೀಯ ಪ್ರವಾಸಿಗರನ್ನು ಕೈಲಾಶ್ ಮತ್ತು ಮಾನಸ ಸರೋವರ ಕ್ಕೆ ನಾಥು ಲಾ ಪಾಸ್ ಮೂಲಕ ಹೋಗಲು ನಿರಾಕರಿಸಿತ್ತು, ಮತ್ತು ಇದನ್ನು ಸಮರ್ಥಿಸಿಕೊಳ್ಳಲು ನಾಥು ಲಾ ಪಾಸ್ ನಲ್ಲಿ ಮಂಜಿನ ಸಮಸ್ಯೆ ಮತ್ತು ಇತರ ಸಮಸ್ಯೆಗಳಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿತ್ತು ಎಂದು ಹೇಳಿತ್ತು, ಆದರೆ ಇದರ ಬೆನ್ನಲ್ಲೆ ಚೀನಾ ಭಾರತದ ಅಂತರಾಷ್ಟ್ರೀಯ ಸಂಬಂಧದ ಬಗ್ಗೆ ತನ್ನ ಪ್ರತ್ರಿಕೆಗಳಲ್ಲಿ ಪ್ರಕಟಿಸಿದೆ. ಭಾರತ ಮತ್ತು ಅಮೇರಿಕದ ನಡುವೆ ಅಂತರಾಷ್ಟ್ರೀಯ ಸಂಬಂಧಗಳು ಗಟ್ಟಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಚೀನಾ ವಿರುದ್ಧ ಭಾರತ ಅಸಡ್ಡೆ ತೋರಿಸುವ ಸಮಯ ಇದಲ್ಲ ಎಂದು ಚೀನಾ ಪ್ರತ್ರಿಕೆಗಳಲ್ಲಿ ಪ್ರಕಟಿಸಿದೆ. ಪ್ರದಾನಿ ನರೇಂದ್ರ ಮೋದಿ ಮತ್ತು ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭೇಟಿಯಾದ ನಂತರದಲ್ಲಿ ಈ ಮಾತನ್ನು ಹೇಳಿದೆ. ಭಾರತಕ್ಕೆ ಅಮೇರಿಕದಿಂದ ಅಪಾರ ಬೆಂಬಲ ಮತ್ತು ಕಾರ್ಯತಂತ್ರದ ಬೆಂಬಲ ನೀಡುವ ವಿಚಾರ ಹಾಗೂ ಅಂತರಾಷ್ಟ್ರೀಯ ಸಂಬಂಧಗಳು ಇನ್ನಷ್ಟು ಗಟ್ಟಿಗೊಂಡ ಹಿನ್ನೆಲೆಯಲ್ಲಿ ಚೀನಾ ದೇಶ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದೆ. ಇನ್ನು ತನ್ನ ಪತ್ರಿಕೆಯಲ್ಲಿ ಭಾರತದ ವಿರುದ್ಧ, ಭಾರತದ ಸೈನ್ಯವು ಸಿಕ್ಕಿಂ ಬಳಿಯ ಚೀನಾ ಗಡಿಯನ್ನು ದಾಟಿದೆ, ಈ ಪ್ರದೇಶದಲ್ಲಿ ವಿನಾಕಾರಣ ಪ್ರಚೋದಿತ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದೆ. ಒಟ್ಟಾರೆ ಅಮೇರಿಕ ದೇಶವು ಭಾರತಕ್ಕೆ ಕಾರ್ಯತಂತ್ರದ ನೆರವಿನ ಭರವಸೆ ನೀಡುತ್ತಿದ್ದಂತೆ ಚೀನಾ ದೇಶವು ಬೆದರಿದಂತೆ ಕಾಣುತ್ತಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


True information
  • Suhasini
  • Lectur