ಹಾಲ್ ಟಿಕೆಟ್ ನೀಡದಿದ್ದಕ್ಕೆ ವಿದ್ಯಾರ್ಥಿ ಆತ್ಮ ಹತ್ಯೆ !

28-06-2017 264
ಆನೇಕಲ್: ಪರೀಕ್ಷೆ ಪ್ರವೇಶ ಪತ್ರ ನೀಡದ ಕಾರಣ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಯು ಆನೆಕಲ್ ನಲ್ಲಿ ನೆಡೆದಿದೆ. ಲೋಕೇಶ್ (೨೦) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಕಾಡುಗೋಡಿ ಪೊಲೀಸ್ ಠಾಣ ವ್ಯಾಪ್ತಿಯ ಚನ್ನಸಂದ್ರ ಬಳಿಯ ಎಂ.ವಿ.ಜೆ ಕಾಲೇಜು ಏರೋ ನಾಟಿಕ್ ಪದವಿಯ ನಾಲ್ಕನೇ ಸೆಮಿಸ್ಟರ್ ವ್ಯಾಸಾಂಗ ಮಾಡುತ್ತಿದ್ದ ಲೋಕೇಶ್, ಹಾಗೂ ಇತರ ವಿದ್ಯಾರ್ಥಿಗಳಿಗೆ ಹಾಜರಾತಿ ಸಮಸ್ಯೆಯಿಂದ ಪರೀಕ್ಷೆ ಪ್ರವೇಶಪತ್ರ ನೀಡಲು ನಿರಾಕರಿಸಿತ್ತು. ಲೋಕೇಶ್ ಸೇರಿದಂತೆ ಹಲವು ವಿದ್ಯಾರ್ಥಿಗಳು, ಹಾಲ್ ಟಿಕೇಟ್ ನೀಡುವಂತೆ ಹಲವು ದಿನಗಳ ಹಿಂದೆ ಕಾಲೇಜು ಅವರಣದಲ್ಲಿ ಪ್ರತಿಭಟನೆ ಕೂಡ ನೆಡೆಸಿದ್ದರು. ಕೊನೆಗೂ ಕಾಲೇಜಿನಿಂದ ಹಾಲ್ ಟಿಕೇಟ್ ನೀಡದ ಕಾರಣ, ಮನನೊಂದ ಲೋಕೇಶ್ ಕಾಲೇಜಿನ ಹಾಸ್ಟೆಲ್ ನಲ್ಲಿಯೇ ನೇಣಿಗೆ ಶರಣಾಗಿದ್ದಾರೆ.
ಒಂದು ಕಮೆಂಟನ್ನು ಹಾಕಿ