ನಮಾಜ್‍ ಗೆ ಅವಕಾಶ ನೀಡಿರುವುದು ತಪ್ಪು !

Kannada News

27-06-2017

ಬೆಂಗಳೂರು: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿರುವುದು ಸರ್ವಧರ್ಮ ಸಮನ್ವಯ ಭಾವದಿಂದ ಕೂಡಿದೆ. ಆದರೆ, ನಮಾಜ್‍ ಗೆ ಅವಕಾಶ ನೀಡಿದರೆ ಅದು ತಪ್ಪು ಎಂದು ಕೇಂದ್ರ ಸಚಿವ ಸದಾನಂದಗೌಡರು ಅಭಿಪ್ರಾಯಪಟ್ಟರು. ಮೇಕ್ರಿವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಅನಾವರಣಗೊಳಿಸಿ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಫ್ತಾರ್ ಕೂಟ ಆಯೋಜಿಸಿರುವುದರಿಂದ ಹಿಂದೆ ಭಾವನಾತ್ಮಕ ವಿಚಾರಗಳಿವೆ. ರಂಜಾನ್ ಆಚರಣೆ ಮಾಡುವುದು ತಪ್ಪಲ್ಲ. ರಾಜಕಾರಣಿಗಳು ರಂಜಾನ್ ಸಂದರ್ಭದಲ್ಲಿ ಟೋಪಿ ಹಾಕಿ ಪೋಸ್ ಕೊಡ್ತೀವಿ. ಆದರೆ, ಪೇಜಾವರ ಶ್ರೀಗಳು ಮಾಡಿದ್ದು ಶೋ ಅಲ್ಲ. ಅವರು ಯಾವುದೇ ಲಾಭಗಳ ಉದ್ದೇಶದಿಂದ ಇಫ್ತಾರ್ ಕೂಟ ಆಯೋಜನೆ ಮಾಡಿಲ್ಲ. ಸರ್ವಧರ್ಮ ಸಮನ್ವಯತೆ ದೃಷ್ಟಿಯಿಂದ ಅವರ ಕೆಲಸ ಸಮರ್ಥನೀಯ. ಆದರೆ, ನಮಾಜ್ ಇನ್ನಿತರೆ ವಿಚಾರಗಳಿಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ಹೇಳಿದರು. ಬುದ್ದಿ ಜೀವಿಗಳಿಗೆ ಬುದ್ದಿ ತಲೆಯಲ್ಲಿ ಇರುವುದಿಲ್ಲ. ಅವರ ಚೀಲದಲ್ಲಿರುತ್ತದೆ. ಅದನ್ನು ಅವರ ಅನವಶ್ಯಕ ಕೆಲಸಗಳಿಗೆ ಖರ್ಚು ಮಾಡುತ್ತಾರೆ ಎಂದು ಸದಾನಂದಗೌಡರು ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರು ವಿವಿಯಲ್ಲಿ ಗೋಮಾಂಸ ಭಕ್ಷಣೆ ಆಗಿರುವುದರ ಹಿಂದೆ ಸರ್ಕಾರದ ಕೈವಾಡ ಇದ್ದಂತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದು ಗಮನಾರ್ಹ. ಸಿದ್ದರಾಮಯ್ಯನವರೇ ಇದಕ್ಕೆ ಕುಮ್ಮಕ್ಕು ನೀಡುವ ಗುಮಾನಿ ಇದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ