“ದಂಗಲ್” 2000 ಕೋಟಿ ಗಳಿಕೆ !

Kannada News

27-06-2017

ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಇನ್ನೊಂದು ದಾಖಲೆ ಮಾಡಿದೆ. ವಿಶ್ವದಾದ್ಯಂತ 2000 ಕೋಟಿ ರೂಪಾಯಿ ಗಳಿಕೆ ಕಂಡ ಭಾರತದ ಮೊದಲ ಸಿನಿಮಾವೆಂಬ ಹೆಗ್ಗಳಿಕೆಗೆ ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಪಾತ್ರವಾಗಿದೆ. ದಂಗಲ್ ಚಿತ್ರ ಇತ್ತೀಚೆಗಷ್ಟೇ ಚೀನಾದ 9000 ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎಸ್ ಎಸ್ ರಾಜಮೌಳಿ ಚಿತ್ರ ಬಾಹುಬಲಿ-2 ಕೂಡ 2 ಸಾವಿರ ಕೋಟಿ ಸಮೀಪದಲ್ಲಿದೆ. ಆದ್ರೆ ಇದಕ್ಕೂ ಮೊದಲೇ ದಂಗಲ್ ದಾಖಲೆ ಬರೆದಿದೆ. ಆಶ್ಚರ್ಯವೆಂದರೆ ದಂಗಲ್ ಭಾರತದಲ್ಲಿ 338.38 ಕೋಟಿ ಮಾತ್ರ ಗಳಿಕೆ ಕಂಡಿದೆ. ಚೀನಾದಲ್ಲಿ ಈ ಮೊದಲು ಬಿಡುಗಡೆಯಾದ ಅಮೀರ್ ಖಾನ್ ಪಿ.ಕೆ ಚಿತ್ರ 100 ಕೋಟಿ ಗಳಿಕೆ ಕಂಡಿತ್ತು. ಚೀನಾದಲ್ಲಿ ತೆರೆಗೆ ಬಂದ ಮೊದಲ ಅಮೀರ್ ಖಾನ್ ಚಿತ್ರ 3 ಈಡಿಯಟ್ಸ್. ಇದು ಸುಮಾರು 15 ಕೋಟಿ ಗಳಿಕೆ ಕಂಡಿತ್ತು. ಇದೀಗ ಚೀನಾ ಮತ್ತು  ವಿಶ್ವದಾದ್ಯಂತ ಒಟ್ಟು 2000 ಕೋಟಿ ಗಳಿಗೆಯ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ