ಹಳೇಯ ಸಂಪ್ರದಾಯ ಬದಲಿಗೆ ಸರ್ಕಾರ ಚಿಂತನೆ !

Kannada News

27-06-2017

ನವದೆಹಲಿ: ಮುಂದಿನ ವರ್ಷದಿಂದ ಏಪ್ರಿಲ್‌ ಬದಲು ಜನವರಿಯಿಂದಲೇ ಹಣಕಾಸು ವರ್ಷವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದ್ದು ಆ ಮೂಲಕ 150 ವರ್ಷಗಳ ಹಳೇಯ ಸಂಪ್ರದಾಯ ಬದಲಾಗಲಿದೆ. ಜೊತೆಗೆ ಮಾರ್ಚ್ ಬದಲು ನವೆಂಬರ್ ತಿಂಗಳಲ್ಲಿ ಕೇಂದ್ರ ಬಜೆಟ್ ಮಂಡಿಸಲಾಗುವುದು ಎಂದು ಸರ್ಕಾರದದ ಮೂಲಗಳು ತಿಳಿಸಿವೆ . 2018ರಿಂದ ಏಪ್ರಿಲ್‌ನಿಂದ ಮಾರ್ಚ್‌ ಬದಲಿಗೆ, ಜನವರಿ ತಿಂಗಳಿನಿಂದ ಡಿಸೆಂಬರ್‌ವರೆಗೆ ಹಣಕಾಸು ವರ್ಷ ಪಾಲಿಸುವ ನಿರ್ಧಾರ ಅಂತಿಮವಾಗಿ ಕಾರ್ಯರೂಪಕ್ಕೆ ತಂದರೆ 150 ವರ್ಷಗಳಷ್ಟು ಹಳೆಯ ಸಂಪ್ರದಾಯಕ್ಕೆ ಕೊನೆ ಬೀಳಲಿದೆ. ಹಣಕಾಸು ವರ್ಷ ಬದಲಿಸುವುದರ ಕಾರ್ಯಸಾಧ್ಯತೆ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಸಮಿತಿಯು ಈಗಾಗಲೇ ಹಣಕಾಸು ಸಚಿವಾಲಯಕ್ಕೆ ತನ್ನ ವರದಿ ಸಲ್ಲಿಸಿದೆ. ಹಣಕಾಸು ವರ್ಷ ಬದಲಿಸುವ ಪ್ರಸ್ತಾವವು ಸದ್ಯಕ್ಕೆ ಚರ್ಚೆಯ ಹಂತದಲ್ಲಿ ಇದೆ. ಸಲಹೆ ಕಾರ್ಯರೂಪಕ್ಕೆ ಬಂದರೆ, ಮುಂದಿನ ವರ್ಷದ ಬಜೆಟ್‌ ಅನ್ನು ನವೆಂಬರ್‌ ತಿಂಗಳಿನಲ್ಲಿಯೇ ಮಂಡಿಸಲಾಗುತ್ತದೆ ಎನ್ನಲಾಗುತ್ತಿದೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ