ರಾಯೀಸ್ ಪ್ರಚಾರದ ವೇಳೆ ಅಭಿಮಾನಿ ಸಾವು: ಸಂತಾಪ ಸೂಚಿಸಿದ ಶಾರುಖ್ ಖಾನ್

Kannada News

26-01-2017

ವಡೋದರಾ: ರಾಯೀಸ್‌ ಚಿತ್ರದ ಪ್ರಚಾರಕ್ಕಾಗಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರು ಆಗಮಿಸಿದ್ದ ವೇಳೆ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಓರ್ವ ಅಭಿಮಾನಿ ಸಾವನ್ನಪ್ಪಿ, ಹಲವರು ಗಾಯಗೊಂಡ ದುರ್ಘ‌ಟನೆ ಸಂಭವಿಸಿದೆ. ರೈಲಿನಲ್ಲಿ ನಿಲ್ದಾಣಕ್ಕೆ ಬರುತ್ತಿದ್ದ ಶಾರುಖ್‌ ಖಾನ್‌ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡಿದ್ದರು, ಜನರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದು ಈ ವೇಳೆ ಕಾಲ್ತುಳಿತ ಸಂಭವಿಸಿದೆ. ವಡೋದರಾದ ಸಾಮಾಜಿಕ ಕಾರ್ಯಕರ್ತ ಫರೀದ್ ಖಾನ್ ಪತಾನ್ ತನ್ನ ಹೆಂಡತಿ ಹಾಗೂ ಮಗಳೊಂದಿಗೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಫರೀದ್ ಖಾನ್ ರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಘಡದಲ್ಲಿ ಇಬ್ಬರು ಪೊಲೀಸ್ ಪೇದೆಗಳು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗ ಸೇರಿಸಲಾಗಿದೆ. ರಾಯಿಸ್ ಸಿನಿಮಾ ಪ್ರಚಾರಕ್ಕಾಗಿ ಅಗಸ್ತ್ ಕಾಂತ್ರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶಾರುಖ್‌ ಖಾನ್‌ ಅವರು ರೈಲು ನಿಲ್ದಾಣಗಳಲ್ಲಿ ಶಾರೂಖ್ ಪ್ರಚಾರ ನಡೆಸಿದ್ದಾರೆ. ಇನ್ನು ಕಾಲ್ತುಳಿತದಲ್ಲಿ ಅಭಿಮಾನಿ ಸಾವನ್ನಪ್ಪಿರುವುದಕ್ಕೆ ನಟ ಶಾರುಖ್ ಖಾನ್ ವಿಷಾದ ವ್ಯಕ್ತ ಪಡಿಸಿದ್ದಾರೆ. ಅವರ ಸಾವು ದುರಾದೃಷ್ಟಕರ ಘಟನೆ, ನಮ್ಮ ಎಲ್ಲಾ ನಿಲ್ದಾಣಗಳಲ್ಲಿದ್ದು, .ಯಾರಿಗಾದರೂ ತೊಂದರೆಯಾದರೇ ಅವರೇ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ ಎಂದು ಶಾರುಖ್ ಹೇಳಿದ್ದಾರೆ. ಶಾರುಖ್‌ರ ಬಹು ನಿರೀಕ್ಷಿತ ರಾಯೀಸ್ ಚಿತ್ರ ಜನವರಿ 25 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ