ಮಂಡ್ಯದಲ್ಲಿ ಕೆಂಪೇಗೌಡರ ಅದ್ಧೂರಿ ಜಯಂತ್ಯುತ್ಸವ !

Kannada News

27-06-2017

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲೂ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಅದ್ಧೂರಿಯಾಗಿ ನಡೆಯಿತು.  ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಿಂದ ಬೆಂಗಳೂರು ಮೈಸೂರು ಹೆದ್ದಾರಿ, ಮತ್ತು ಮಂಡ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಪೂಜಾ ಕುಣಿತ, ವೀರಗಾಸೆ, ಗಾರುಡಿ ಗೊಂಬೆ, ಜೋಡೆತ್ತಿನ ಗಾಡಿ ಸೇರಿದಂತೆ ವಿವಿಧ ಕಲಾ ಪ್ರಕಾರದ ತಂಡದವರು ಭಾಗಿಯಾಗಿದ್ದರು. ಕೆಂಪೇಗೌಡರ, ಮತ್ತು ಬಾಲಗಂಗಾಧರ ಶ್ರೀ, ನಿರ್ಮಲಾನಂದನಾಥ ಶ್ರೀಗಳ ಭಾವಚಿತ್ರಗಳನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಭಾಗಿಯಾಗಿದ್ದೂ, ನಗರದ ಎಲ್ಲಾ ರಸ್ತೆಗಳಲ್ಲೂ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿತ್ತು. ಇನ್ನು ಬೆಂಗಳೂರಿನ ಮೇಖ್ರಿ ವೃತ್ತದ ಬಳಿಯಿರುವ ಕೆಂಪೇಗೌಡ ಗಡಿ ಗೋಪುರ ಪಾರ್ಕ್ ನಲ್ಲಿ, ಗಡಿಗೋಪುರ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಡಿ.ವಿ ಸದಾನಂದ ಗೌಡ ಮಾಲಾರ್ಪಣೆಯನ್ನು ಮಾಡಿದರು, ಈ ವೇಳೇ ಚಲನಚಿತ್ರ ನಟರಾದ ಶ್ರೀ ಪುನೀತ್ ರಾಜಕುಮಾರ್, ನವರಸನಾಯಕ ಜಗ್ಗೇಶ್, ಸಂಸದರಾದ ಶ್ರೀ ಪಿ ಸಿ ಮೋಹನ್ , ಶಾಸಕರಾದ ಡಾ ಸಿ ಎನ್ ಅಶ್ವಥ್ ನಾರಾಯಣ್ ಉಪಸ್ಥಿತರಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ