ಹಿಂದೂ ಧರ್ಮಕ್ಕೆ ದೊಡ್ಡ ಅಪಮಾನವೇನೂ ಆಗಿಲ್ಲ !

Kannada News

27-06-2017 195

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ವಿಚಾರ ನಿಧಾನವಾಗಿ ವಿವಾದಿತ ರೂಪ ಪಡೆದುಕೊಳ್ಳುತ್ತಿದ್ದು, ಇನ್ನು ವಿವಾದದಕ್ಕೆ ಕೇಂದ್ರ ಬಿಂದುವಾಗಿದ್ದ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಈ ವಿಚಾರವಾಗಿ ರಾಜ್ಯಾದ್ಯಂತ ಜುಲೈ 2 ರಂದು ಪ್ರತಿಭಟ ಮಾಡಲು ನಿರ್ಧರಿಸಿದ್ದೂ, ಶ್ರೀರಾಮ ಸೇನೆಯ ಪ್ರತಿಭಟನೆಯ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದಾರೆ. ಉಡುಪಿಯ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪೇಜಾವರ ಶ್ರೀಗಳಿಗೆ ಬೆಂಬಲವಾಗಿ, ಶ್ರೀ ರಾಮ ಸೇನೆ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಮಾತನಾಡಿದ ಪೇಜಾವರ ಶ್ರೀಗಳು, ಉಡುಪಿ ಶ್ರೀಕೃಷ್ಣ ಮಠದಲ್ಲಿ ನಮಾಜ್ ವಿಚಾರ ಸುಖಾಸುಮ್ಮನೆ ದೊಡ್ಡ ವಿವಾದವನ್ನಾಗಿ ಮಾಡಲಾಗಿದೆ. ರಂಜಾನ್ ತಿಂಗಳಲ್ಲಿ ಉಪವಾಸ ಮುಗಿದ ಬಳಿಕ, ನಮಾಜ್ ಮಾಡುವ ಕ್ರಮವಿದೆ ಎಂದು ಮುಸಲ್ಮಾನ ಬಾಂಧವರು ತನ್ನ ಬಳಿ ಹೇಳಿದರು. ರಥಬೀದಿಯಲ್ಲಿ ಇರುವುದು ಅಷ್ಟಮಠಗಳು ಹಾಗಾದ್ರೆ ಎಲ್ಲಿ ನಮಾಜ್ ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸಿತು, ಆಗ ಸಾರ್ವಜನಿಕ ಭೋಜನ ಶಾಲೆಯಲ್ಲಿ ನಮಾಜ್ ಮಾಡಿದ್ದಾರೆ, ಕೃಷ್ಣ ಮಠದೊಳಗೆ ನಮಾಜ್ ಮಾಡಿಲ್ಲ, ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡಿದರೆ ತಪ್ಪೇನು, ನಮಾಜ್ ಮಾಡಿದ್ದರಿಂದ ಹಿಂದೂ ಧರ್ಮಕ್ಕೆ ದೊಡ್ಡ ಅಪಮಾನವೇನೂ ಆಗಿಲ್ಲ ಎಂದು ಶ್ರೀಗಳು ಹೇಳಿದರು. ಅಲ್ಲದೇ ಉಪವಾಸ ತ್ಯಜಿಸಿ ಊಟ ಮಾಡುವಾಗ ನಮಾಜ್ ಮಾಡುವ ಕ್ರಮವಿದೆ ಎಂದು ಆಹ್ವಾನ ಮಾಡಿಯಾಗಿತ್ತು, ಅವರನ್ನು ಹಾಗೇ ವಾಪಸ್ ಕಳುಹಿಸಲು ಆಗುತ್ತಾ ಎಂದು ಪ್ರಶ್ನಿಸಿದರು. ಇನ್ನು ನಮಾಜ್ ಮಾಡಿದ್ದು, ಊಟ ಮಾಡಿದ್ದು ದೊಡ್ಡ ವಿಷಯವೇನಲ್ಲ. ಮಧ್ವಾಚಾರ್ಯರ ಕಾಲದಿಂದಲೂ ಮುಸ್ಲೀಮರ ಜೊತೆ ಉತ್ತಮ ಬಾಂಧವ್ಯವಿದೆ, ಮಧ್ವಾಚಾರ್ಯರು ಮಾಡಿದ ಮೇಲೆ ಈ ಪದ್ದತಿಯ ನಿಮಿತ್ತ ನಾವು ಊಟ ಹಾಕಬಾರದಾ, ಮಠ ಕಟ್ಟಲು ಮಧ್ವಾಚಾರ್ಯರಿಗೆ ಜಾಗ ಕೊಟ್ಟದ್ದು ಆಗಿನ ಮುಸ್ಲಿಂ ರಾಜರು ಎಂದರು. ಮಧ್ವಾಚಾರ್ಯರು, ರಾಘವೇಂದ್ರ ಶ್ರೀಗಳು ಮುಸ್ಲೀಮರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು ಮುಸ್ಲೀಮರ ಜೊತೆಗಿನ ಸೌಹಾರ್ದ ಸಂಪರ್ಕ ಮಧ್ವಾಚಾರ್ಯರ ಕಾಲದಿಂದಲೂ ಇದೆ ಎಂದು ತಿಳಿಸಿದರು. ಮತ್ತು ಶ್ರೀರಾಮ ಸೇನೆಯ ಪ್ರತಿಭಟನೆ ಬಗ್ಗೆ ಏನನ್ನೂ ಹೇಳುವುದಿಲ್ಲ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡುತ್ತೇವೆ. ನಾನು ಶಾಂತವಾಗಿಯೇ ಇದ್ದೇನೆ ನಾನು ಪ್ರಮೋದ್ ಮುತಾಲಿಕ್ ಜೊತೆ ಬಹಳ ಹೊತ್ತು ಮಾತನಾಡಿದೆ ಆದರೆ ಮುತಾಲಿಕ್ ಕನ್ವಿನ್ಸ್ ಆಗಲಿಲ್ಲ, ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ ಯಾವ ರೀತಿ ಪ್ರತಿಭಟನೆ ಮಾಡುತ್ತಾರೆಂದು ಗೊತ್ತಿಲ್ಲ ಕಾದು ನೋಡೋಣ ಎಂದ ಪೇಜಾವರ ಶ್ರೀಗಳು ಇಲ್ಲಿ ಹೇಳಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ