ರಾಮ ಮಂದಿರ: ಸಾಕ್ಷಿ ಮಹಾರಾಜ್ ನಿರ್ಣಯವೇ ಅಂತಿಮವಲ್ಲ !

Kannada News

27-06-2017

ಉಡುಪಿ: ರಾಮಮಂದಿರಕ್ಕೆ ಉಡುಪಿಯಿಂದ ಚಾಲನೆ ಎಂದು, ಸಂಸದ ಸಾಕ್ಷಿ ಮಹಾರಾಜ್ ನೀಡಿರುವ ಹೇಳಿಕೆಗೆ, ಉಡುಪಿಯ ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ಸಾಕ್ಷಿ ಮಹಾರಾಜರು ಕೃಷ್ಣಮಠಕ್ಕೆ ಬಂದು ಹೋಗಿದ್ದಾರೆ. ಹಿಂದಿಯಲ್ಲಿ ಮಾತನಾಡಿದ್ದರಿಂದ ಸ್ಪಷ್ಟವಾಗಿ ಅರ್ಥವಾಗಲಿಲ್ಲ. ರಾಮಮಂದಿರ ನಿರ್ಮಾಣ ವಿಚಾರ ಮಾತನಾಡಿದರು, ನಮ್ಮ ಮೂರನೇ ಪರ್ಯಾಯದಲ್ಲಿ, ಉಡುಪಿಯಲ್ಲಿ ಧಾರ್ಮಿಕ ಸಂಸತ್ತು ಆಗಿತ್ತು. ಕೀಲಿ ಕೈ ಒಡೆದು ಪ್ರವೇಶಿಸುವ ನಿರ್ಧಾರ ಮಾಡಲಾಗಿತ್ತು. ಅಂದು ರಾಜೀವ್ ಗಾಂಧಿ ಮಂದಿರದ ಕೀಲಿ ಕೈ ತೆಗೆಸಿದ್ದು, ಎಲ್ಲರೂ ದರ್ಶನ ಪಡೆದಿದ್ದರು, ಈ ಬಾರಿಯ ಸಮಾವೇಶದಲ್ಲಿ ರಾಮಮಂದಿರಕ್ಕೆ ಮಹೂರ್ಥ ಆಗಬಹುದು ಎಂದು ಮಹಾರಾಜ್ ಹೇಳಿರಬಹುದು, ಆದರೆ ಅವರೊಬ್ಬರೇ ನಿರ್ಣಯ ಮಾಡುವವರಲ್ಲ ಕಮಿಟಿಯಲ್ಲಿ ಮೊದಲು ತೀರ್ಮಾನ ಆಗಬೇಕು, ಯಾವುದೂ ಸ್ಪಷ್ಟವಾಗದೆ ನಾನು ಈ ಬಗ್ಗೆ ಏನೂ ಹೇಳಲಾರೆ ಎಂದರು. ಸಂವಿಧಾನ, ಕಾನೂನು ,ರಾಜ್ಯ ಸಭೆ, ಲೋಕಸಭೆಯಲ್ಲಿ ತೀರ್ಮಾನ ವಾಗಬೇಕು. ಸಂತರ ಸಮಾವೇಶ ಉಡುಪಿಯಲ್ಲಿ ನಡೆಯಲಿದೆ, ನವೆಂಬರ್ ತಿಂಗಳಲ್ಲಿ ವಿಶ್ವ ಸಂತ ಸಮ್ಮೇಳನ ನಡೆಸುವ ಅಪೇಕ್ಷೆಯಿದೆ, ರಾಮಮಂದಿರ ನಿರ್ಮಾಣ ಬಗ್ಗೆ ಆಗ ಚರ್ಚೆ ಆಗಬಹುದು ಎಂದು ಉಡುಪಿಯಲ್ಲಿ ಪೇಜಾವರಶ್ರೀ ಹೇಳಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ