7 ಅಂಗಡಿಗಳಿಗೆ ಖದೀಮರ ಕನ್ನ !

Kannada News

27-06-2017

ಬೆಳಗಾವಿ: ಅಂಗಡಿಗಳ ಶೆಟರ್ ಮುರಿದು ಲಕ್ಷಾಂತರ ಹಣ ದೋಚಿಕೊಂಡು ಪರಾರಿಯಾಗಿರುವ ಘಟನೆಯೂ  ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಡೆದಿದೆ. ಸರಣಿ ಕಳ್ಳತನ ನಡೆಸಿದ ಕಳ್ಳರು, ಸುಮಾರು 7 ಅಂಗಡಗಳಿಗೆ ಕನ್ನ ಹಾಕಿದ್ದಾರೆ. ಜಿಲ್ಲೆಯ ರಾಯಭಾಗ ಪಟ್ಟಣದ ಹನುಮಾನ ಸರ್ಕಲ್ ನಲ್ಲಿರುವ 7 ಅಂಗಡಿಗಳಲ್ಲಿ ಕಳ್ಳತನ ನಡೆಸಿದ್ದಾರೆ. ಕ್ರಷಿ ಆಗ್ರೋ, ಕೇಂದ್ರ ಕಿರಾಣಿ ಸ್ಟೋರ್ ಸೇರಿದಂತೆ 7 ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ನೆನ್ನೆ ವ್ಯಾಪಾರ ಮುಗಿಸಿಕೊಂಡು ಮನೆಗೆ ಹೋದ ಅಂಗಡಿಯವರು, ಬೆಳಿಗ್ಗೆ ಬಂದಾಗ ಅಂಗಡಿಯ ಶೆಟರ್ ಮುರಿದಿರುವುದು ಕಂಡುಬಂದಿದೆ, ಒಳ ಹೋಗಿ ನೋಡಿದಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ