ರೋಗಿಗಳನ್ನು ವಂಚಿಸುತ್ತಿದ್ದವನ ಸೆರೆ !

Kannada News

27-06-2017

ಮೈಸೂರು: ಆಸ್ಪತ್ರೆಗೆ ಬರುವ ರೋಗಿಗಳ ಬಳಿ ಬಲವಂತವಾಗಿ ಹಣ ಪೀಕುತ್ತಿದ್ದ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಹಳ್ಳಿ ಬೋಗಾದಿಯ ನಿವಾಸಿಯಾದ ಅರುಣ್ ಕುಮಾರ್ ಬಂಧಿತ ಆರೋಪಿ. ಕೆ.ಆರ್. ಆಸ್ಪತ್ರೆಗೆ ಬರುವ ರೋಗಿಗಳ ಲ್ಯಾಬ್ ವರದಿ ಪಡೆಯಲು ಮಧ್ಯವರ್ತಿಯಂತೆ ನಟಿಸಿ ಬಲವಂತವಾಗಿ ಹಣ ಕೀಳುತ್ತಿದ್ದ. ಈತನ ವಂಚನೆ ಹಲವು ದಿನಗಳಿಂದ ನಡೆಯಿತ್ತಿದ್ದು, ಈ ಬಗ್ಗೆ ಆಸ್ಪತ್ರೆಯ, ಸಿಬ್ಬಂದಿ ಅಥವಾ ಆಡಳಿತ ಮಂಡಳಿಯ ಗಮನಕ್ಕೆ ಬರದಿದ್ದು ಯಾವುದೇ ಕ್ರಮ ಕೈಗೊಂಡಿರಲಿಲ್ಲ, ಆದರೆ ಇಂದು ತನ್ನ ಕಾರ್ಯದಲ್ಲಿ ತೊಡಗಿದ್ದ ಅರುಣ್ ಕುಮಾರ್, ಹಣ ವಸೂಲಿ ಮಾಡುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಹಲವು ದಿನಗಳಿಂದಲೂ ಅಮಾಯಕ ರೋಗಿಗಳಿಂದ ಹಣ ಕೀಳುತ್ತಿದ್ದ ಆರೋಪ ಈತನ ಮೇಲಿತ್ತು. ಇದೀಗ ಪೊಲೀಸರು ಬಂದಧಿಸಿದ್ದು, ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ