ಕುಡಿದು ಕಾರು ಚಲನೆ, ಬೈಕ್ ಸವಾರ ಬಲಿ !

Kannada News

26-06-2017

ಬೆಂಗಳೂರು: ಕಂಠಪೂರ್ತಿ ಕುಡಿದು ಚಾಲಕನೋರ್ವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್ ಸವಾರನನ್ನು ಬಲಿ ತೆಗೆದುಕೊಂಡ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಬೈಪಾಸ್ ನಲ್ಲಿ ನಡೆದಿದೆ. ಬಿಡದಿಯ ನಿವಾಸಿ ಸ್ವರೂಪ್ (36) ಮೃತಪಟ್ಟವರು, ಹಿಂಬದಿ ಕುಳಿತಿದ್ದ  ಸ್ವರೂಪ್ ಅವರ ಪತ್ನಿ ಲಾವಣ್ಯ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಡದಿಯಿಂದ ಸ್ವರೂಪ್ ದಂಪತಿ ಆಂಧ್ರದ ಲೇಪಾಕ್ಷಿಗೆ ಬೈಕ್‍ನಲ್ಲಿ ತೆರಳಿ ವಾಪಾಸ್ಸಾಗುತ್ತಿದ್ದರು. ಮಾರ್ಗ ಮಧ್ಯೆ  ಬೈಪಾಸ್ ರಸ್ತೆಯಲ್ಲಿ ಚಿಕ್ಕಬಳ್ಳಾಪುರದ ಶೇಖರಬಾಬು ಕುಡಿದ ಅಮಲಿನಲ್ಲಿ ಹಿಂದಿನಿಂದ ಬಂದು ಸ್ವರೂಪ್ ಅವರ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಸ್ವರೂಪ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಹಿಂಬದಿ ಕೂತಿದ್ದ ಮೃತನ ಪತ್ನಿ ಲಾವಣ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಬಳ್ಳಾಪುರ ನಗರ ಸಂಚಾರ ಪೊಲೀಸರು ಆರೋಪಿ ಶೇಖರ್ ಬಾಬುನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ