ಪೋನ್ ಕರೆ ಸ್ವೀಕರಿಸದಿದ್ದಕ್ಕಾಗಿ ಆತ್ಮಹತ್ಯೆ !

Kannada News

26-06-2017

ಬೆಂಗಳೂರು: ನಗರದ ಹೊರವಲಯದ ತಿಪ್ಪಗೊಂಡನಹಳ್ಳಿಯಲ್ಲಿ ಹಲವು ಬಾರಿ ಮೊಬೈಲ್ ಕರೆ ಮಾಡಿದರೂ  ಪ್ರಿಯಕರ  ಸ್ವೀಕರಿಸದಿದ್ದಕ್ಕೆ ಮನನೊಂದ ನರ್ಸಿಂಗ್ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ರಿಜೀಯಾ ಕಾಟೂನ್ (19) ಎಂದು ಗುರುತಿಸಲಾಗಿದೆ. ಅಂಬಿಕಾ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲಮೋ ಇನ್ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ರಿಜೀಯಾ ಇದೇ ಕಾಲೇಜಿನಲ್ಲಿ ಸಮೀಮ್ ಅಲ್ಸಬ್ ಎಂಬುವನನ್ನು ಪ್ರೀತಿಸುತ್ತಿದ್ದಳು. ಮೂಲತಃ ಪಶ್ಚಿಮ ಬಂಗಾಳ ಮೂಲದವರಾದ ರಿಜೀಯಾ ಕಳೆದ ಒಂದು ವರ್ಷದ ಹಿಂದೆ ಅಂಬಿಕಾ ಕಾಲೇಜಿಗೆ ವಿದ್ಯಾಭ್ಯಾಸಕ್ಕಾಗಿ ಸೇರಿದ್ದಳು. ಪ್ರಿಯತಮನ ಜೊತೆ ಇರಲು ಮನೆಯನ್ನು ಬಾಡಿಗೆ ಪಡೆದಿದ್ದಳು. ಆಗ ಫೋನ್ ರಿಸಿವ್ ಮಾಡದೇ ಪ್ರಿಯಕರ ನಿರ್ಲಕ್ಷ್ಯಿಸಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಪೋಷಕರು ಮೃತದೇಹವನ್ನು ವಿಮಾನದ ಮೂಲಕ ಪಶ್ಚಿಮ ಬಂಗಾಳಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ