ಸಹಾಯ ಮಾಡಲು ಬಂದವರನ್ನೇ ಥಳಿಸಿದರು !

Kannada News

26-06-2017

ಬೆಂಗಳೂರು: ಅಪಘಾತವಾದ ಸಂದರ್ಭದಲ್ಲಿ ಸಹಾಯ ಮಾಡಲು ಹೋದ ಇಬ್ಬರು ಯುವಕರಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನೆಲಮಂಗಲ ಸಮೀಪದ ಲಕ್ಕೆನಹಳ್ಳಿಯಲ್ಲಿ ನಡೆದಿದೆ. ಲಕ್ಕೆನಹಳ್ಳಿ ಬಳಿ ಬೈಕ್ ಒಂದು ಅಪಘಾತವಾಗಿ ಗಾಯಗೊಂಡವರನ್ನು ರಕ್ಷಿಸಲು ಹೋದ ಯುವಕರೇ ಅಪಘಾತ ಮಾಡಿದ್ದಾರೆ, ಎಂದು ತಿಳಿದ ಗ್ರಾಮಸ್ಥರು ವನರಾಜು ಮತ್ತು ನರಸಿಂಹಮೂರ್ತಿ ಎಂಬುವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಗೊಂಡ ಯುವಕರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ