ರಸ್ತೆ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಬಲೆಗೆ !

Kannada News

26-06-2017

ಬೆಂಗಳೂರು: ಒಂಟಿಯಾಗಿ ಓಡಾಡುವವರನ್ನು, ವಾಹನ ಚಾಲಕರನ್ನು ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಸುಲಿಗೆ ಮಾಡುತ್ತಿದ್ದ ನಾಲ್ವರ ತಂಡವನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅಂತರಹಳ್ಳಿ ನಿವಾಸಿ ಪ್ರವೀಣ್(21) ಮಾದೇಶ(22),ವಡ್ಡರಪಾಳ್ಯ ಗ್ರಾಮದ ನಿವಾಸಿ ನವೀನ್(23) ಹಾಗೂ ಮೇಡರಹಳ್ಳಿ ನಿವಾಸಿ ಶ್ರೀನಿವಾಸ್(22) ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ 20 ದಿನಗಳಿಂದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ, ವಿವಿಧ ಗ್ರಾಮಗಳ ರಸ್ತೆಗಳಲ್ಲಿ ಸಂಜೆ ಬೈಕ್‍ ಗಳಲ್ಲಿ ಹೋಗುವವರನ್ನು ವಿಳಾಸ ಕೇಳುವ ನೆಪದಲ್ಲಿ ತಡೆದು ನಿಲ್ಲಿಸಿ ಕಣ್ಣಿಗೆ ಖಾರದಪುಡಿಯನ್ನು ಎರಚಿ ನಗದು, ಚಿನ್ನಾಭರಣ, ಮೊಬೈಲ್‍ಗಳನ್ನು ಕಳವು ನಡೆಸುತ್ತಿದ್ದರು. ಆರೋಪಿಗಳು ಕಳೆದ ಜೂನ್ 16 ರಂದು ಗಂಟಿಗಾನಹಳ್ಳಿ  ರಸ್ತೆಯಲ್ಲಿ ಬೈಕ್‍ ನಲ್ಲಿ ಹೋಗುತ್ತಿದ್ದ ಗಿರೀಶ್ ಎಂಬಾತನನ್ನು ಅಡ್ಡಗಟ್ಟಿ ಹಣ ದೋಚಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ್ದ ಗಿರೀಶ್‍ಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದರು. ಈತ ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಕಮಲೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನಾಲ್ಕು ಜನ ಆರೋಪಿಗಳು ದರೋಡೆ ನಡೆಸಲು ಸಂಚು ರೂಪಿಸಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ ಕಳವು ಮಾಡಿದ್ದ ಮೊಬೈಲ್‍ಗಳು, 1 ಪಲ್ಸರ್, ಮತ್ತು 2 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಆರೋಪಿಗಳು ತಾಲ್ಲೂಕಿನ ವಿವಿಧ ಕಡೆಗಳಲ್ಲಿ ರಸ್ತೆ ಹೋಕರನ್ನು ಅಡ್ಡಗಟ್ಟಿ ದರೋಡೆ ನಡೆಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ