ಮನೆಗೆ ನುಗ್ಗಿ 24 ಲಕ್ಷ ದೋಚಿದ ದುಷ್ಕರ್ಮಿಗಳು !

Kannada News

26-06-2017

ಬೆಂಗಳೂರು: ಸೋಲದೇವನಹಳ್ಳಿಯ ಆರ್‍.ಆರ್ ಕಾಲೇಜು ಮಾಲೀಕ ಅರುಣ್ ಅವರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು 24 ಲಕ್ಷ ನಗದು ದೋಚಿ ಪರಾರಿಯಾಗಿರುವ ದುರ್ಘಟನೆ ಸಂಜಯನಗರದ ಎಚ್‍.ಎಸ್.ವಿ ಬಡಾವಣೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಸಂಜಯ ನಗರದ ಎಚ್.ಎಸ್.ಜಿ 7ನೇ ಕ್ರಾಸ್‍ ನಲ್ಲಿರುವ ಸೋಲದೇವನಹಳ್ಳಿಯಲ್ಲಿ ಆರ್‍.ಆರ್ ಕಾಲೇಜು ನಡೆಸುತ್ತಿರುವ ಅರುಣ್ ಅವರ ಮನೆಗೆ ರಾತ್ರಿ ನುಗ್ಗಿರುವ ದುಷ್ಕರ್ಮಿಗಳು ಮನೆಯಲ್ಲಿರುವ ವಸ್ತುಗಳನ್ನೆಲ್ಲಾ ಚೆಲ್ಲಾ-ಪಿಲ್ಲಿ ಮಾಡಿ ಕಬೋರ್ಡ್ ನಲ್ಲಿದ್ದ 24 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಎಂದು ಡಿಸಿಪಿ ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ. ಕೆಲಸದ ನಿಮಿತ್ತ ಅರುಣ್ ಅವರು ಭಾನುವಾರ ಸಂಜೆ 7ರ ವೇಳೆ ಮನೆಗೆ ಬೀಗ ಹಾಕಿಕೊಂಡು ಹೋಗಿ ಮುಂಜಾನೆ ಬಂದು ನೋಡಿದಾಗ ದುಷ್ಕರ್ಮಿಗಳು ಮನೆಗೆ ನುಗ್ಗಿ ಕಳವು ಮಾಡಿದ್ದು, ಪ್ರಕರಣ ದಾಖಲಿಸಿರುವ ಸಂಜಯನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ  ಇನ್ನೊಂದೆಡೆ. ಜೆ.ಪಿ ನಗರದ 6 ನೇ ಹಂತದಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಗೊರವನಹಳ್ಳಿ ಲಕ್ಷ್ಮಿ ದೇವಾಲಯಕ್ಕೆ ಹೋಗಿದ್ದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು 14 ಸಾವಿರ ನಗದು, 100 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿ ಶ್ರೀಕಂಠಮೂರ್ತಿ ಅವರು, ಜೆಪಿನಗರದ 6ನೇ ಹಂತದ 29ನೇ ಕ್ರಾಸ್‍ ನಲ್ಲಿದ್ದ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ನಿನ್ನೆ ಬೆಳಿಗ್ಗೆ 7ಕ್ಕೆ ಗೊರವನಹಳ್ಳಿಗೆ ಹೋಗಿ ರಾತ್ರಿ 10ರ ವೇಳೆ ವಾಪಸ್ಸಾಗಿದ್ದಾರೆ. ಅಷ್ಟರಲ್ಲಿ ಅವರ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಮನೆಯಲ್ಲಿನ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಬೀರುವಿನಲ್ಲಿದ್ದ 14 ಸಾವಿರ ನಗದು, 100 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಪುಟ್ಟೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ