ನಮ್ಮ ಆಹಾರದ ಬಗ್ಗೆ ಪ್ರಶ್ನಿಸಲು ನೀವ್ಯಾರು..?

Kannada News

26-06-2017

ಮೈಸೂರು: ಮೈಸೂರಿನ ಸರ್ಕಾರಿ ಸಭಾಂಗಣದಲ್ಲಿ ಗೋಮಾಂಸ ತಿಂದ ವಿಚಾರಕ್ಕೆ ಸಂಬಂಧಿಸಿದಂತೆ, ಪ್ರೊ.ಮಹೇಶ್‌ ಚಂದ್ರಗುರು ಅವರು ಸಮರ್ಥನೆ ನೀಡಿದ್ದಾರೆ. ನಾವು ಗೋಮಾಂಸ ತಿಂದಿದ್ದೆ ಸರಿ ಎಂದು ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಸಂವಿಧಾನ ವಿರೋಧಿ ಕೆಲಸ ಮಾಡಿಲ್ಲ. ಗೋಮಾಂಸ ಸೇವನೆಯನ್ನು ಸಂವಿಧಾನದಲ್ಲಿ ನಿಷೇಧ ಮಾಡಿಲ್ಲ ಎಂದ ಅವರು, ಕೇಂದ್ರ ಸರ್ಕಾರ ಬಹುಜನರ ಆಹಾರ ಪದ್ದತಿ ಮೇಲೆ ಆಕ್ರಮಣ ಮಾಡಿದೆ. ಇದನ್ನು ವಿರೋಧಿಸಲು ನಾವು ಗೋಮಾಂಸ ತಿಂದು ಜನರಿಗೆ ಸಂದೇಶ ನೀಡಬೇಕಿತ್ತು. ಈ ಕಾರಣಕ್ಕಾಗಿಯೇ ಕಾರ್ಯಕ್ರಮದಲ್ಲಿ ಗೋಮಾಂಸ ತಿಂದು ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇವೆ ಎಂದರು. ನಿನ್ನೆ ತಿಂದಿದ್ದೇವೆ,ಇಂದು ತಿನ್ನುತ್ತೇವೆ, ನಾಳೆಯೂ ತಿನ್ನುತ್ತಲೇ ಇರುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ನಮ್ಮ ಆಹಾರ ಪದ್ದತಿಯನ್ನು ಪ್ರಶ್ನೆ ಮಾಡಲು ನೀವು ಯಾರು?  ನಮಗೆ ಯಾವುದಾದರೂ ನೋಟಿಸ್ ಬಂದರೆ ಅದಕ್ಕೆ ಉತ್ತರ ನೀಡುತ್ತೇವೆ. ನಾವು ಗೋಮಾಂಸ ತಿನ್ನುವುದರಿಂದ ನಿಮ್ಮ ಮಾನಮಾರ್ಯಾದೆಗೆ ಏನಾದ್ರು ಸಮಸ್ಯೆಯೇ ಎಂದು ಕಾರ್ಯಕ್ರಮಕ್ಕೆ ಖಂಡನೆ ವ್ಯಕ್ತಪಡಿಸಿದವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ