ರಂಜಾನ್ ಆಚರಣೆ ವೇಳೆ ಸಂಘರ್ಷ !

Kannada News

26-06-2017

ಮಂಗಳೂರು: ಮಂಗಳೂರಿನ ಇತಿಹಾಸ ಪ್ರಸಿದ್ದ ಉಳ್ಳಾಲ ದರ್ಗಾದಲ್ಲಿ ರಂಜಾನ್ ಆಚರಣೆಯ ವೇಳೆ ಗೊಂದಲ ಸೃಷ್ಟಿಯಾಗಿದ್ದು, ಇದರಿಂದ ರಂಜಾನ್ ಆಚರಣೆಗೆ ಸಂಬಂಧಿಸಿದಂತೆ ಎರಡು ಬಣಗಳ ಮಧ್ಯೆ ಸಂಘರ್ಷ ನಡೆದಿದೆ. ಚಂದ್ರ ದರ್ಶನವಾಗಿದ್ದ ಹಿನ್ನೆಲೆಯಲ್ಲಿ ನಿನ್ನೆಯೇ ಕರಾವಳಿಯಲ್ಲಿ ರಂಜಾನ್ ಆಚರಿಸಲಾಗಿತ್ತು. ಆದರೆ ಉಳ್ಳಾಲ ಖಾಜಿ ಕೂರ ತಂಗಳ್ ಮಾತ್ರ ಇಂದು ಆಚರಿಸುವಂತೆ ಸೂಚಿಸಿದ್ದರು. ಉಳ್ಳಾಲದ ದರ್ಗಾ ವ್ಯಾಪ್ತಿಯ ಮಸೀದಿಗಳಿಗೆ ಈ ಸೂಚನೆ ನೀಡಿದ್ದರು. ಆದರೆ ಇದನ್ನು ವಿರೋಧಿಸಿ ಒಂದು ಬಣ ನಿನ್ನೆಯೇ ರಂಜಾನ್ ಆಚರಿಸಿತ್ತು. ಇನ್ನೊಂದು ಬಣ ಇಂದು ಆಚರಣೆಗೆ ಮುಂದಾದ ವೇಳೆ ವಿವಾದ ಸೃಷ್ಟಿಯಾಗಿದ್ದು, ಉಳ್ಳಾಲ ದರ್ಗಾ ಆಡಳಿತ ಮಂಡಳಿಯಿಂದ ದರ್ಗಾಗೆ ಬೀಗ ಜಡಿದು ಪ್ರಾರ್ಥನೆಗೆ ಅವಕಾಶ ನೀಡದಿರುವುದು ಸಂಘರ್ಷಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡದ ಜಿಲ್ಲಾ ಖಾಜಿ ತ್ವಾಖಾ ಅಹ್ಮದ್ ಮುಸ್ಲಿಯರ್ ಮತ್ತು ಉಡುಪಿ ಖಾಜಿ ನಿನ್ನೆಯೇ ಆಚರಣೆಗೆ ಸೂಚಿಸಿದ್ದರು. ಅದರೆ ಉಳ್ಳಾಲ ಖಾಜಿ ಮಾತ್ರ ಚಂದ್ರದರ್ಶನವಾಗಿಲ್ಲ ಎಂದು ಇಂದು ಆಚರಣೆಗೆ ಸೂಚಿಸಿದ್ದರು, ಇದರಿಂದ ಎರಡು ಬಣಗಳ ನಡುವೆ ತೀವ್ರ ಸಂಘರ್ಷ ನಡೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ