ಮಗನನ್ನೇ ಕೊಂದ ತಂದೆ !

Kannada News

26-06-2017

ಉತ್ತರ ಕನ್ನಡ: ತಂದೆಯಿಂದಲೇ ಮಗನ ಕೊಲೆಯಾದ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ. ವಿನೋದ ಪಾಂಡುರಂಗ ಹರಿಕಂತ್ರ (೨೦) ಕೊಲೆಯಾದ ಮಗ. ಪಾಂಡುರಂಗ ನಾರಾಯಣ ಹರಿಕಂತ್ರ (೪೫) ತಂದೆಯಾಗಿರುವ ಆರೋಪಿ. ಹಾರವಾಡದ ಸೀಬರ್ಡ್ ಕಾಲೋನಿಯಲ್ಲಿ ಈ ಘಟನೆ ಸಂಭವಿದಿದೆ. ಮನೆಗೆ ಹಣ ನೀಡುತ್ತಿಲ್ಲ ಎಂಬ ಕಾರಣಕ್ಕೆ ಕೊಪಗೊಂಡ ತಂದೆ, ರುಬ್ಬುವ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದಾರೆ. ಮೊರಬದ ಅಜ್ಜಿ ಮನೆಯಲ್ಲಿದ್ದ ವಿನೋದ. ಎರಡು ತಿಂಗಳಿಂದ ತಂದೆ ಮನೆಯಲ್ಲಿ ಉಳಿದುಕೊಂಡಿದ್ದು, ಕೆಲಸಕ್ಕೆ ಹೋದರೂ ಮನೆಗೆ ಹಣವನ್ನು ನೀಡುತ್ತಿರಲಿಲ್ಲ, ಇದರಿಂದ ರೋಸಿದ್ದ ತಂದೆ ಈ ಕೃತ್ಯ ಸಗಿರುವುದಾಗಿ ತಿಳಿದು ಬಂದಿದೆ. ಸದ್ಯ ಅಂಕೋಲಾ ಪೊಲೀಸರಿಂದ ಆರೋಪಿಯಾದ ಪಾಂಡುರಂಗ ನಾರಾಯಣನ ಬಂಧನವಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ