ಮತ್ತೊಂದು ಮರ್ಯಾದೆ ಗೇಡು ಹತ್ಯೆ !

Kannada News

26-06-2017

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಮರ್ಯಾದೆ ಗೇಡು ಹತ್ಯೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೆತ್ತ ಮಗಳನ್ನೇ ಬಲಿ ಪಡೆದಿದ್ದ ತಂದೆ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಗುರುಸಿದ್ದೇಗೌಡ, ಮಹದೇವಮ್ಮ, ಮಹೇಶ್, ಕಿರಣ್, ರಾಮೇಗೌಡ ಬಂಧಿತ ಆರೋಪಿಗಳು. ಹತ್ಯೆ ಮಾಡಿದ ಇವರು ಊಟಿಯಲ್ಲಿ ತಲೆ ಮರೆಸಿಕೊಂಡಿದ್ದರು, ಪ್ರಕರಣವನ್ನು ಕೈಗೆತ್ತಿಕೊಂಡ ಹೆಚ್.ಡಿ ಕೋಟೆ ತಾಲ್ಲೂಕಿನ, ಸರಗೂರು ಪಟ್ಟಣ ಠಾಣೆ ಪೊಲೀಸರು, ಆರೋಪಿಗಳ ಜಾಡು ಹಿಡಿದು ಅವರನ್ನು ಬಂಧಿಸಿದ್ದಾರೆ. ಪೋಷಕರಿಗೆ ಇಷ್ಟವಿಲ್ಲದ ಯುವಕನನ್ನು ಪ್ರೀತಿಸಿದ್ದಕ್ಕೆ ಪೋಷಕರಿಂದಲೇ ಯುವತಿಯ ಹತ್ಯೆ ನಡೆದಿರುವ ಬಗ್ಗೆ ಬಲವಾದ ಸಂಶಯ ವ್ಯಕ್ಯವಾಗಿತ್ತು. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಪಾರ್ವತಿಪುರದಲ್ಲಿ ತಂದೆಯಿಂದಲೇ ಮಗಳ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿತ್ತು. ಇದರಿಂದ ಅನುಮಾನಗೊಂಡು, ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನಿಂದ ಎಚ್.ಡಿ. ಕೋಟೆಯ ಸರಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದನು. ೧೯ ವರ್ಷದ ಶೋಭಾ ಹತ್ಯೆಯಾಗಿದ್ದಾಳೆಂದು ಆಕೆಯನ್ನು ಪ್ರೀತಿಸುತ್ತಿದ್ದ ಕೃಷ್ಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದ. ಕೃಷ್ಣ ಮತ್ತು ಶೋಭಾ ಪರಸ್ಪರ ಒಪ್ಪಿ, ಓಡಿಹೋಗಿ ಮದುವೆಯಾಗಲು ಯತ್ನಿಸಿದಾಗ, ಶೋಭಾ ತಂದೆ ಗುರುಸಿದ್ದೇಗೌಡ, ಕೃಷ್ಣನ ಮೇಲೆ, ಐವರು ದಾಂಡಿಗರಿಂದ ಮನಸೋ ಇಚ್ಛೆ ಹಲ್ಲೆ ನಡೆಸಿರುವುದಾಗಿಯೂ ಆರೋಪಿಸಿದ್ದ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಕೃಷ್ಣ ಸ್ಥಳದಿಂದ ಓಡಿ ಹೋಗಿದ್ದ. ಅದೇ ವೇಳೆ ಶೋಭಾ ಮೇಲೂ ತಂದೆ ಮತ್ತು ದಾಂಡಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆಗ ಸ್ಥಳದಲ್ಲಿ ಶೋಭಾ ಸಾವನ್ನಪ್ಪಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ೩ ತಿಂಗಳಾದರೂ ಕೃಷ್ಣನ ಸಂಪರ್ಕಕ್ಕೆ ಸಿಗದ ಶೋಭಾ. ತಂದೆ ಮನೆಯಲ್ಲೂ ಇಲ್ಲ, ಸಂಬಂಧಿಕರ ಮನೆಯಲ್ಲೂ ಶೋಭಾ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಅಲ್ಲದೇ  ತಂದೆಯೇ ಶೋಭಾಳನ್ನು ಕೊಂದು ಸುಟ್ಟು ಹಾಕಿರುವುದಾಗಿ ಪಾರ್ವತಿಪುರದಲ್ಲಿ ಗುಸು ಗುಸು ಮಾತು ಕೇಳಿ ಬಂದಿದ್ದವು. ಈ ಸಂಬಂಧ ಶೋಭಾ ಪ್ರಿಯಕರ ಕೃಷ್ಣ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆ ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರಿಂದ ಐವರು ಆರೋಪಿಗಳ ಬಂಧನವಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ