ಆತಂಕ ಸೃಷ್ಟಿಸಿದ ಪೋಸ್ಟರ್ !

Kannada News

26-06-2017

ಶ್ರೀನಗರ: ವಿಕೃತಿ ಮೆರೆದು ಆನಂದ ಪಡುವವರ ಕೃತ್ಯಗಳು ಒಂದೆರಡಲ್ಲ, ಜಮ್ಮು ಕಾಶ್ಮೀರದಲ್ಲಿ ಆಗಾಗ ದೇಶ ವಿರೋಧಿ ಘೋಷಣೆಗಳು ಮತ್ತು ಪ್ರತ್ಯೇಕವಾದಿಗಳ ಹೋರಾಟ, ಗಡಿಯಲ್ಲಿ ಆಗಾಗ ಗುಂಡಿನ ದಾಳಿ, ಇಷ್ಟೆಲ್ಲಾ ಸಮಸ್ಯೆಗಳು ಇದ್ದು, ಇಂದು ಜಮ್ಮುಕಾಶ್ಮೀರದಲ್ಲಿ ಕಿಡಿಗೇಡಿಗಳು ಪುಲ್ವಾಮಾ ಜಿಲ್ಲೆಯಲ್ಲಿ ಮತ್ತಷ್ಟು ವಿಕೃತಿ ಮೆರೆದಿದ್ದಾರೆ. ರಂಜಾನ್ ಹಬ್ಬದ ದಿನವಾದ ಇಂದು ಜಿಲ್ಲೆಯಲ್ಲಿ ಭಾರೀ ವಿವಾದದ ಚಿತ್ರವೊಂದು ಕಂಡುಬಂದಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿದೆ, ಜಿಲ್ಲೆಯಲ್ಲಿ 26/11 ರ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯ್ಯದ್, ಮತ್ತು ಹಿಜ್ ಬುಲ್ ಮುಜಾಹಿದ್ದೀನ್ ಮುಖಂಡ ಸೈಯದ್ ಸಲಾಲುದ್ದೀನ್, ಅವರ ಚಿತ್ರವಿರುವ ಪೋಸ್ಟರ್ ಗಳನ್ನು ಗೋಡೆಗೆ ಅಂಟಿಸಿ ವಿಕೃತಿ ಮೆರೆದಿದ್ದಾರೆ. ಅಲ್ಲದೇ ಪೋಸ್ಟರ್ ನಲ್ಲಿ ಪ್ರತ್ಯೇಕ ವಾದಿಗಳಾದ ಸೈಯದ್ ಗಿಲಾನಿ ಯವರ ಚಿತ್ರ ಕೂಡ ಕಂಡು ಬಂದಿದೆ. ಇದರಿಂದ ಎಚ್ಚೆತ್ತ ಪೊಲೀಸರು, ಹಬ್ಬದ ದಿನದಂದು ಆತಂಕ ಸೃಷ್ಟಿಸುವುದನ್ನು ತಡೆಯಲು ಪೋಸ್ಟರ್ ಅನ್ನು ತೆರವು ಗೊಳಿಸಿದ್ದಾರೆ. ಅಲ್ಲದೇ ಹಿಜ್ಬುಲ್ ಪರ ಘೋಷಣೆಗಳನ್ನು ಕೂಗಿದ್ದಾರೆ ಎಂದು ತಿಳಿದು ಬಂದಿದೆ. ಜಮ್ಮು ಕಾಶ್ಮೀರದ ಸರ್ಕಾರ, ಈ ಕುರಿತು ಗಂಭಿರವಾಗಿ ಪರಿಗಣಿಸಿದ್ದು ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ.       ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ