ನಮಗೆ ಈದ್ ಇಲ್ಲ. ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ !

Kannada News

26-06-2017

ಹರಿಯಾಣ: ದೇಶದೆಲ್ಲೆಡೆ ರಂಜಾನ್ ಹಬ್ಬದ ಸಂಭ್ರಮದಲ್ಲಿದ್ದರೇ, ಹರಿಯಾಣದ ಬಲ್ಲಭ್ ಘರ್ ನಲ್ಲಿ ಮಾತ್ರ ಇಲ್ಲಿನ ಸ್ಥಳೀಯ ಮುಸ್ಲೀಮರು ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ರೈಲಿನಲ್ಲಿ 17 ವರ್ಷದ ಯುವಕನಾದ ಜುನೈದ್ ಜನಸಮೂಹ ನಡವೆ ಚೂರಿ ಇಂದ ಇರಿದು ಕೊಲ್ಲಲ್ಪಟ್ಟಿದ್ದ. ಇದನ್ನು ಪ್ರತಿಭಟಿಸಿದ ಕುಟುಂಬಸ್ಥರು ಮತ್ತು ಅಲ್ಲಿನ ಸ್ಥಳೀಯರು, ತಮ್ಮ ಕೈಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ಸಾವಿಗೆ ನ್ಯಾಯ ದೊರಕಿಸಿಕೊಂಡುವಂತೆ ಆಗ್ರಹಿಸಿದ್ದಾರೆ. ಕಳೆದ ಜೂನ್ 23 ರಂದು ರೈಲಿನಲ್ಲಿ ವಾಪಸ್ಸಾಗಿತ್ತಿದ್ದ, ಜುನೈದ್ ಮತ್ತು ಅವರ ಇಬ್ಬರು ಸಹೋದರರನ್ನು, ರೈಲಿನಲ್ಲಿ ಕೆಲ ದುಷ್ಕರ್ಮಿಗಳು, ನಮ್ಮನ್ನು ಕಂಡ ಕೂಡಲೆ ಅವರು ತಲೆಗೆ ಕಾಕಿಕೊಂಡಿದ್ದ ವಸ್ತ್ರಗಳನ್ನು ತೆಗೆಯಲು ಹೇಳಿ ನಿಂದಿಸಿದ್ದಾರೆ, ಮತ್ತು ಬ್ಯಾಗಿನಲ್ಲಿ ಗೋಮಾಂಸ ತೆಗೆದುಕೊಂಡು ಹೋಗುತ್ತಿದ್ದೀರಾ ಎಂದು ಆರೋಪಿಸಿದರು. ನಮ್ಮನ್ನು ನೀವು ಪಾಕಿಸ್ತಾನದವರು, ನಿಮ್ಮ ಪಾಕಿಸ್ತಾನಕ್ಕೆ ತೆರಳಿ ಎಂದು ಹೆದರಿಸಿದ್ದಾರೆ, ಇದೇ ವೆಳೇ ಮಾತಿನ ಚಕಮಕಿ ನೆಡದು ಮಾತಿನ ನಡುವೆಯೇ ಚೂರಿಯಿಂದ ಇರಿದು ಕೊಂದಿದ್ದಾರೆ. ಇದನ್ನು ವಿರೋಧಿಸಿ ಕುಟುಂಬಸ್ಥರು ಮತ್ತು ಸ್ಥಳೀಯರು ಪ್ರತಿಭಟಿಸುತ್ತಿದ್ದಾರೆ. ಮೃತನ ತಂದೆಯು ನನ್ನ ಮಗನನ್ನು ಧಾರ್ಮಿಕ ಆಧಾರದ ಮೇಲೆ ದುಷ್ಟರು ಕೊಂದಿದ್ದಾರೆ ಎಂದು ದು:ಖ ದಿಂದ ಹೇಳಿದ್ದಾರೆ. ಅಲ್ಲದೇ ನನ್ನ ಮಗನ ಸಾವಿಗೆ ಕಾರಣರಾವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ