ಕರಾಳ ದಿನಗಳನ್ನು ಪಠ್ಯ ಪುಸ್ತಕದಲ್ಲಿ ಸೇರಿಸಬೇಕು..?

Kannada News

26-06-2017

ಹೈದರಾಬಾದ್: ದೇಶ ಕಂಡ ಅತ್ಯಂತ ಕಠಿಣ ದಿನಗಳಾದ 1975 ರ ತುರ್ತು ಪರಿಸ್ಥಿತಿಯನ್ನು ಬಿಂಬಿಸುವ ಸಂಪೂರ್ಣ ಚಿತ್ರಣವನ್ನು, ಶಾಲೆಗಳಲ್ಲಿ ಪಾಠವಾಗಿ ಪರಿಚಯಿಸಬೇಕೆಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ. ತುರ್ತು ಪರಿಸ್ಥಿತಿಯ 42 ನೇ ವರ್ಷದ ಆಚರಣೆಯಲ್ಲಿ ಈ ಮಾತನ್ನು ಹೇಳಿದ್ದಾರೆ. ಅತೀ ದೊಡ್ಡ ಪ್ರಜಾಪ್ರಭುತ್ವ  ವ್ಯವಸ್ಥೆ ಹೊಂದಿರುವ ಭಾರತದಲ್ಲಿ, ಯಾರಿಂದಲೂ ಮರೆಯಲು ಸಾಧ್ಯವಾಗದ  ತುರ್ತು ಪರಿಸ್ಥಿತಿಯ ಕರಾಳ  ದಿನಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕಿದೆ ಎಂದು ಒತ್ತಿ ಹೇಳಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊಲೆ ಮಾಡಿರುವ ದಿನಗಳ  ಬಗ್ಗೆ ಮತ್ತು ಅದರ ಮರುಸ್ಥಾಪನೆಯ ಕುರಿತು ಯುವ ಪೀಳಿಗೆ ತಿಳಿದುಕೊಳ್ಳಲಿದ್ದಾರೆ, ಎಂದು ತಮ್ಮ ಅಭಿಪ್ರಾಯನ್ನು ಹಂಚಿಕೊಂಡರು. ತೆಲಂಗಾಣದಲ್ಲಿ ಬಿಜೆಪಿ  ವತಿಯಿಂದ ಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ