ಆಸ್ಪತ್ರೆ ನೌಕರರ ಜಗಳ: ಸಾರ್ವಜನಿಕರ ಪರದಾಟ  

Kannada News

24-06-2017

ಮೈಸೂರು: ರಜಾ ಪಡೆಯುವ ವಿಚಾರದಲ್ಲಿ ನೌಕರರ ನಡುವೆ ಮಾರಾಮಾರಿ ನಡೆದ ಘಟನೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ಕಂಟ್ರೋಲ್ ರೂಮಿನಲ್ಲಿ  ಕಾರ್ಯ ನಿರ್ವಹಿಸುತ್ತಿದ್ದ ನೌಕರರ ನಡುವೆ ರಜಾ ವಿಚಾರವಾಗಿ ತೀವ್ರ ತರದ ಜಗಳ ನಡೆದಿದ್ದು, ಇದರಿಂದ ಸಾರ್ವಜನಿಕರ ಪರದಾಡುವಂತಾಯಿತಾಗಿದೆ. ನೌಕರರ ಜಗಳದಿಂದ ಕಂಟ್ರಲ್ ರೂಂ ಸೇವೆ ಸ್ಥಗಿತಗೊಳಿಸಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೆ.ಆರ್.ಆಸ್ಪತ್ರೆಯ ಗುತ್ತಿಗೆ ನೌಕರರಾದ ರವಿ, ವೆಂಕಟೇಶ್, ಅನಿತಾ ಎಂಬವರ ನಡುವೆ ರಜಾ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ರವಿ ಎಂಬಾತ ಕಂಟ್ರೋಲ್ ರೂಂನ ಬಾಗಿಲು, ಮತ್ತು ಕಿಟಕಿ ಗಾಜುಗಳನ್ನು ಒಡೆದುಹಾಕಿ ಪರಾರಿಯಾಗಿದ್ದಾನೆಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಚಂದ್ರಶೇಖರ್ ಎಂಬುವರಿಗೆ ದೂರು ನೀಡಿದ್ದು, ಈ ಬಗ್ಗೆ ವಿಚಾರಿಸಲು ಚಂದ್ರಶೇಖರ್ ಅವರೇ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಮೈಸೂರು ಜಿಲ್ಲೆಯಾದ್ಯಂತ ವೈರಲ್ ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದರ ನಡುವೆ, ಕಂಟ್ರೋಲ್ ರೂಮ್ ಸೇವೆ ಸ್ಥಗಿತ ಗೊಂಡಿರುವುದರಿಂದ ಸಮರ್ಪಕ ಮಾಹಿತಿ ಸಿಗದೇ ಸಾರ್ವಜನಿಕರು ಪರಿತಪಿಸುವಂತಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ