ಕುಟುಂಬ ರಾಜಕಾರಣ ಆರೋಪಕ್ಕೆ ಸಿಎಂ ತಿರುಗೇಟು !

Kannada News

24-06-2017

ಮೈಸೂರು: ಸಿಎಂ ವಿರುದ್ದ ಎಚ್.ಡಿ.ಕುಮಾರಸ್ವಾಮಿ ಕುಟುಂಬ ರಾಜಕಾರಣ ಟೀಕೆ ಮಾಡಿದ ಹಿನ್ನೆಲೆಯಲ್ಲಿ, ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕುಮಾರ ಸ್ವಾಮಿ ಅವರಿಗೆ ತಿರುಗೇಟು ನೀಡಿದರು. ನಮ್ಮ ಮನೆಯಲ್ಲಿ ಎಷ್ಟು ಜನ ಶಾಸಕರಾಗಿದ್ದಾರೆ, ದೇವೆಗೌಡರ ಮನೆಯಲ್ಲಿ ಎಷ್ಟು ಜನ ಶಾಸಕರಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ನಾನು ರಾಜಕಾರಣಕ್ಕೆ ಬಂದು ೪೦ ವರ್ಷವಾಗಿದೆ. ನನ್ನ ಮಕ್ಕಳು ಶಾಸಕರಾಗಿದ್ದಾರಾ? ಎಂದು ಪ್ರಶ್ನಿಸುವ ಮೂಲಕ ಎಚ್.ಡಿ.ಕುಮಾರಸ್ವಾಮಿಗೆ ಸಿಎಂ ತಿರುಗೇಟು ನೀಡಿದರು. ಇನ್ನು ಯಡಿಯೂರಪ್ಪ ಅವರ ವಿಚಾರವಾಗಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಹಾನ್ ಸುಳ್ಳುಗಾರ. ಅವರ ಆರೋಪಗಳಿಗೆ ಉತ್ತರ ಕೊಡುತ್ತಾ ಕೂರಲು ಸಾಧ್ಯವಿಲ್ಲ ಎಂದು ಹರಿಹಾಯ್ದರು. ಅಲ್ಲದೇ ಸಿದ್ದರಾಮಯ್ಯ ಇಂದು ಮೈಸೂರಿನಲ್ಲಿ ಜನತಾದರ್ಶನ ನಡೆಸಿದ್ದಾರೆ. ಮೈಸೂರಿನ ಟಿ.ಕೆ ಬಡಾವಣೆಯಲ್ಲಿರುವ ತಮ್ಮ ನಿವಾಸದ ಬಳಿ ಜನತಾದರ್ಶನ ನಡೆಸಿ. ಬೆಳಿಗ್ಗೆಯಿಂದಲೇ ಸಿಎಂ ಗಾಗಿ ಕಾದುಕುಳಿತಿದ್ದ ನೂರಾರು ಸಾರ್ವಜನಿಕರಿಂದ ಅಹವಾಲುಗಳ ಸ್ವೀಕರಿಸಿ, ಕೆಲ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಮತ್ತು ಉಳಿದ ಅಹವಾಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ